ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ “ಸ್ವಚ್ಛತಾ ಹೀ ಸೇವಾ” 2014 ರ “ಸ್ವಚ್ಛತೆಯೇಡೆಗೆ ದಿಟ್ಟ ಹೆಜ್ಜೆ” ವಿಶೇಷ ಅಭಿಯಾನದಡಿ ಜಾಗೃತಿ ಜಾಥಾ ಶುಕ್ರವಾರ ನಡೆಸಲಾಯಿತು.
ದಾಸನಕೊಪ್ಪ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಸ ವಿಲೇವಾರಿ ವಾಹನದ ಜಾಗೃತಿ ಗೀತೆಗಳ ಮೂಲಕ ಜಾಥಾದಲ್ಲಿ ಪಾಲ್ಗೊಂಡು ಕಸ ಸಂಗ್ರಹಣೆ ಮಾಡಿ ಎಲ್ಲೆಂದರಲ್ಲಿ ಬಿಸಾಡದಂತೆ ಜಾಗೃತಿ ಮೂಡಿಸಿದರು.
ದಾಸನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡು ಮಾನವ ಸರಪಳಿ ನಿರ್ಮಿಸಿ, ಜಾಗೃತಿ ಮೂಡಿಸಿ, ಹಸಿಕಸ ಒಣಕಸ ಬೇರ್ಪಡಿಸಿ ಕಸ ವಿಲೇವಾರಿ ವಾಹನಕ್ಕೆ ನೀಡಬೇಕು ಎಂಬ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಸಪ್ಪ ಪಿ ಲಮಾಣಿ, ಕಾರ್ಯದರ್ಶಿ ದಶರತ್ ರಾಜ್ ಬೂದಿಹಾಲಕರ್, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಹಾಗೂ ಶಿಕ್ಷಕ ವೃಂದ, ತಾಲೂಕು ಐಇಸಿ ಸಂಯೋಜಕರು ಇದ್ದರು.