
ಶಿರಸಿ: ಇಲ್ಲಿನ ಗ್ರೀನ್ ಕೇರ್ ಸಂಸ್ಥೆಯು ತನ್ನ ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಮಹಾಲಕ್ಷ್ಮಿ ಮೆಮೊರಿಯಲ್ ಆಸ್ಪತ್ರೆ, ಶಿರಸಿ ಇವರ ಸಹಯೋಗದಲ್ಲಿ 180 ದಿನಗಳ ಆರೋಗ್ಯ ಸಹಾಯಕರ ಉಚಿತ ಕೌಶಲ್ಯ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಸಂಸ್ಥೆಯು ಈಗಾಗಲೇ ಯಲ್ಲಾಪುರ ತಾಲೂಕಿನಲ್ಲಿ 80 ಯುವತಿಯರಿಗೆ ಟೈಲರಿಂಗ್ ಮತ್ತು ಬ್ಯೂಟಿಶಿಯನ್ ತರಬೇತಿ ಹಾಗೂ ಶಿರಸಿಯಲ್ಲಿ ಬಿ.ಕಾಂ ಪದವೀಧರರಿಗೆ ಅಕೌಂಟ್ ಅಸಿಸ್ಟಂಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಇದೀಗ ಹೆಚ್ಚು ಉದ್ಯೋಗವಕಾಶವಿರುವ ಆರೋಗ್ಯ ಸಹಾಯಕರ ಕೌಶಲ್ಯ ತರಬೇತಿಯನ್ನು ಪ್ರಾರಂಭಿಸುತ್ತಿದ್ದೇವೆ. ತರಬೇತಿಯಲ್ಲಿ ನುರಿತ ವೈದ್ಯರು, ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ಆಧಾರಿತ ತರಬೇತಿ ನೀಡಿ ವಿವಿಧ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕನಿಷ್ಠ 10ನೇ ತರಗತಿ ಪೂರೈಸಿರುವ ಯುವಕ ಯುವತಿಯರು ತಮ್ಮ ಸ್ವವಿವರದೊಂದಿಗೆ ಗ್ರೀನ್ ಕೇರ್ ಸಂಸ್ಥೆ, 346, ಸಾಗರ ರೈಸ್ ಮಿಲ್ ಹತ್ತಿರ, ವೀರಭದ್ರಗಲ್ಲಿ ಶಿರಸಿ ಇಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆTel:+918197406950, Tel:+9108384451261, Tel:+918904531265 ಸಂಪರ್ಕಿಸಿ ದಿನಾಂಕ 05.10.2024 ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಮಹಾಲಕ್ಷ್ಮಿ ಮೆಮೊರಿಯಲ್ ಆಸ್ಪತ್ರೆ ಡಾ. ದಿನೇಶ ಹೆಗಡೆ ಹಾಗೂ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ ಆರ್. ಎಂ. ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.