ಯಲ್ಲಾಪುರ: ಮಕ್ಕಳು ತರಕಾರಿ,ಸೊಪ್ಪು,ಇತ್ಯಾದಿ ಸೇವನೆಯ ಜೊತೆಗೆ, ಅಕ್ಷರ ದಾಸೋಹದಡಿಯಲ್ಲಿ ಬಿಸಿಯೂಟ ಪ್ರತಿದಿನ ಕ್ಷೀರಭಾಗ್ಯ,ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ,ಬಾಳೆಹಣ್ಣು ಇವೆಲ್ಲವೂ ಮಗುವಿನ ಸರ್ವಾಂಗೀಣ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಶಿಕ್ಷಕಿ ಸಾಹಿತಿ ಶಿವಲೀಲಾ ಹುಣಸಗಿ ಹೇಳಿದರು.
ಅವರು ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡುತ್ತಿದ್ದರು.
ಮಕ್ಕಳು ಇಂದಿನಿಂದ ತರಕಾರಿಗಳನ್ನು ತಟ್ಟೆಯಿಂದ ತೆಗೆಯದೆ ತಿನ್ನುತ್ತೇವೆ ಎಂಬ ಪ್ರತಿಜ್ಞೆ ಮಾಡಿಸಿದರು.
ಶಿಕ್ಷಕ ಮಹೇಶ ಭಟ್ಟ ಪೋಷಕಾಂಶ ಆಹಾರಗಳ ಮಹತ್ವದ ಕುರಿತು ವಿವರಿಸಿದರು. ಎಸ್ಡಿಎಂಸಿ ಉಪಾಧ್ಯಕ್ಷ ಗುರುರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಆಶಾ ನಾಯರ್, ಅಂಗನವಾಡಿ ಕಾರ್ಯಕರ್ತೆ ತ್ರೇಷಾ ನೋಹಾ, ಶಿಕ್ಷಕರಾದ ನಾಗರಾಜ ಆಚಾರಿ, ರಾಮ ಗೌಡ ಭಾಗವಹಿಸಿದ್ದರು.