ಯಲ್ಲಾಪುರ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ ವಿಶ್ವವಿದ್ಯಾಲಯವು ಹೆಗ್ಗಾರ ಜಪದಮನೆಯ ಯಮುನಾ ಭಾಗ್ವತ್ ಅವರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ.
“ಇನ್ವೆಸ್ಟಿಗೇಷನ್ ಆಫ್ ಪ್ಲೆಕ್ಷರಲ್ ಸ್ಟ್ರೆಂತ್ ಆನ್ ಕರೋಡೆಡ್ ಪ್ರಿಸ್ಟ್ರೆಸ್ಡ್ ಸೆಲ್ಫ್ ಕಾಂಪ್ಯಾಂಕ್ಟಿಂಗ್ ಕಾಂಕ್ರಿಟ್ ಬೀಮ್” ಎನ್ನುವ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌ಡಿ ಪ್ರದಾನ ಮಾಡಿದೆ. ಇವರು ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಗೋಪಿನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು.
ಇವರು ಹೆಗ್ಗಾರ್ ಕೃಷ್ಣ ಭಾಗ್ವತ ಜಪದಮನೆ ಮತ್ತು ಸರೋಜಿನಿ ದಂಪತಿಯ ಪುತ್ರಿ. ಡಾ. ರಾಧಾಕೃಷ್ಣ ಭಟ್ಟ ಹುಲಗಾನ ಇವರ ಪತ್ನಿ.