Slide
Slide
Slide
previous arrow
next arrow

ಗಣೇಶ ಚೌತಿಯಲ್ಲಿ ಹೊಸತನ ಹೇಗೆ..!!?

300x250 AD

ಮಾಹಿತಿ:
ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯ. ಶಿರಸಿ

ಖಂಡಿತವಾಗಿಯೂ ಗಣೇಶ ಚೌತಿ ಹೊಸತನ,
ಬದಲಾವಣೆ ಅವಶ್ಯ. ಹೇಗೆ ಬದಲಾವಣೆ ತರಬಹುದು!!?

300x250 AD
  • ಗಣೇಶ ಚೌತಿಯ ಪೆಂಡಾಲ್ ಗಳಲ್ಲಿ ಕ್ಯೂಆರ್ ಅಳವಡಿಕೆ. ಗಣೇಶ ಚೌತಿ ಸಂಪೂರ್ಣವಾಗಿ ನಗದು ರಹಿತವಾದರೆ ಅಂತಹ ಮಂಡಳಿಗಳಿಗೆ ಕೇಂದ್ರಸರ್ಕಾರದಿಂದ ವಿಶೇಷ ಪ್ರಮಾಣ ಪತ್ರ.
  • ಕರ್ಪೂರದ ಆರತಿಯನ್ನು ಸಂಪೂರ್ಣವಾಗಿ ನಿಷೇಧಿಸುವುದು, ಹತ್ತಿಯ ಬತ್ತಿಯಿಂದ ಆರತಿ.
  • ಪ್ರತಿದಿನ ಭಜನೆ. ಮಕ್ಕಳು, ಯುವಕರಿಗೆ, ಮಹಿಳೆಯರಿಗೆ ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಪ್ರತ್ಯೇಕ ವ್ಯವಸ್ಥೆ.
  • ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಗುರಿಯೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರದಕ್ಷಿಣೆ, ನಮಸ್ಕಾರ ಸೇವೆಗಳ ಸಂಕಲ್ಪ ಮತ್ತು ಅವಕಾಶ.
  • ಭಾರತೀಯ ಸಂಸ್ಕೃತಿಯ ಹಬ್ಬ, ವಾಡಿಕೆ, ಆಚರಣೆಗಳ ವೈಜ್ಞಾನಿಕ ಕಾರಣಗಳು ತಿಳಿಸುವಂತಹ ವಿಡಿಯೋ ಪ್ರದರ್ಶನ.
  • ದೊಡ್ಡ ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಹೆಚ್ಚಾಗಿ ಸಂಗ್ರಹವಾದ ಹೂವುಗಳನ್ನು ಊರಿನ ಇತರ ದೇವಸ್ಥಾನಗಳಿಗೆ ಹಂಚಿಕೆಗೆ ಯೋಜನೆ.
  • ಪ್ರತಿ ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಶ್ರೀದೇವರ ಬೃಹತ್ ಫೋಟೋದೊಂದಿಗೆ ಸೆಲ್ಫಿ ತೆಗೆಯಲು ಒಂದು ಸೆಲ್ಫಿ ವೇದಿಕೆ.
  • ಸ್ಥಳೀಯರು ತಯಾರಿಸಿದ ಗಣಪತಿಯ ರೀಲ್ಸ್‌ಗಳ ಪ್ರದರ್ಶನಕ್ಕೆ ಒಂದು ಸ್ಕ್ರೀನ್.
  • ಗಣೇಶ ಚೌತಿಯ ಪೆಂಡಾಲ್ ವೈದಿಕರಿಗಾಗಿ ಸೇವಾ ರೂಪದಲ್ಲಿ ಮಂತ್ರೋಚ್ಚಾರಣೆಗೂಂದು ಅವಕಾಶದ ವೇದಿಕೆ.
  • ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಭಕ್ತರಿಂದ ಮಂತ್ರೋಚ್ಛಾರಣೆಗೂಂದು ಅವಕಾಶದ ವೇದಿಕೆ.
  • ಗಣೇಶ ಚೌತಿಯ ಪೆಂಡಾಲ್‌ಗಳಲ್ಲಿ ಭಕ್ತರ ಕರಸೇವೆಗೆ ವಿಶೇಷ ಯೋಜನೆ, ಯೋಚನೆ.
  • ನಿರಂತರ ಆ ಓಣಿಯ ಸ್ವಚ್ಛತೆಗೆ ಕರಸೇವಕರ ಪಡೆ.
  • ಗಣೇಶ್ ಉತ್ಸವದಲ್ಲಿ ಮುದ್ರಿಸಲಾಗುವ ಪಾವತಿಗಳ ಹಿಂದೆ ಸಾರ್ವಜನಿಕರಿಗೆ ಉಪಯುಕ್ತವಾಗುವ ತುರ್ತು ದೂರವಾಣಿ ಸಂಖ್ಯೆಗಳ ಪಟ್ಟಿ.
  • ಗಣೇಶ್ ಮಂಟಪದಲ್ಲಿ ಆ ಓಣಿಯ ಯೋಗಪಟುಗಳಿಂದ ಮತ್ತು ಜಿಮ್‌ಗಳಿಗೆ ಹೋಗುವುದರಿಂದ ದೇಹದಾರ್ಢ್ಯ ಪ್ರದರ್ಶನ.
  • ಗಣೇಶೋತ್ಸವದ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ.
  • ಬಡವರಿಗಾಗಿ ಉಚಿತ ಅಥವಾ ಸೇವಾರೂಪದ
    ವಿನಿಯೋಗಗಳನ್ನು ಮಾಡಿಕೊಡುವ ಸ್ವಯಂಸೇವಕ ಪುರೋಹಿತರಿಗೆ ಸನ್ಮಾನ.
  • ಡಿಜೆರಹಿತ ಗಣೇಶೋತ್ಸವ ಆಯೋಜನೆ. ಪಾರಂಪರಿಕ ಪಂಚವಾದ್ಯಕ್ಕೆ ಅವಕಾಶ. ಹೀಗೆ ಡಿಜೆ ರಹಿತ, ಮೈಕ್ ರಹಿತ ಗಣೇಶೋತ್ಸವ ಆಚರಿಸಿದ ಮಂಡಳದ ಐದು ಅಧ್ಯಕ್ಷರಿಗೆ ಗಣರಾಜ್ಯೋತ್ಸವದ ಸರಕಾರಿ ಕಾರ್ಯಕ್ರಮದಲ್ಲಿ ಆಮಂತ್ರಣ.
  • ಗಣಪತಿ ಮಂಡಲದ ವತಿಯಿಂದ ಸ್ಥಳೀಯ ಯುವಕ ಯುವತಿಯರಿಗೆ ಡೋಲ್, ಲೇಜಿಮ್ ತರಬೇತಿ.
  • ಪ್ರತಿ ಮಂಡಳದ ಮೆರವಣಿಗೆಯಲ್ಲಿ ಬೃಹತ್ ಲೋಕಮಾನ್ಯ ತಿಲಕ ಅವರ ಭಾವಚಿತ್ರ ಪ್ರದರ್ಶನ.
  • ಎಲ್ಲ ಗಣಪತಿ ಮಂಡಲಗಳ ಜಂಟಿ ಸಹಭಾಗಿತ್ವದಲ್ಲಿ ಅಂಬುಲೆನ್ಸ್ ಹಾಗೂ ಶವವಾಹಕ ಸೇವೆಗಳು ಅವಶ್ಯಕ ವೆಚ್ಚ ಪಾವತಿಯೊಂದಿಗೆ.
  • ಪ್ರತಿ ಮಂಡಳದಲ್ಲಿ ಉಚಿತ ವೈದ್ಯಕೀಯ ಸೇವೆ ಸಲ್ಲಿಸಲು ಅವಕಾಶ.
  • ಎಲ್ಲ ಗಣಪತಿ ಮಂಡಲಗಳ ಸಹಭಾಗಿತ್ವದಲ್ಲಿ
    ಉಪಯೋಗಿಸದೆ ಉಳಿದ ಔಷಧಿಗಳ ಬ್ಯಾಂಕ್ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ.
  • ಗಣಪತಿಯ ಪೆಂಡಾಲ್‌ನಲ್ಲಿ ಪ್ರತಿದಿನ ಎರಡು ಸೇವಾ ನಿವೃತ್ತ ಯೋಧರಿಗೆ ಗಣಪತಿಯ ಪ್ರಸಾದದೊಂದಿಗೆ ಸನ್ಮಾನ.
  • ಆ ವರ್ಷ ವೀರ ಮರಣ ಹೊಂದಿದ ಸೈನಿಕರಿಗೆ ಗೌರವ ಸಲ್ಲಿಕೆಗೆ ಒಂದು ಸ್ಥಳ ಹಾಗೂ ಅವರ ಫೋಟೋ ಅಳವಡಿಕೆ.
  • ಪರಮವೀರ ಚಕ್ರ ಪಡೆದ ಸೈನಿಕರ ಯುದ್ಧದ ವಿಡಿಯೋ ಪ್ರದರ್ಶನಕ್ಕೆ ಪ್ರತಿ ಮಂಡಳದಲ್ಲೂ ಪ್ರತಿದಿನ ಆಯೋಜನೆ.
  • ಗಣಪತಿ ಮೂರ್ತಿಯ ತಯಾರಿಕೆ ಹಾಗೂ ಚಿತ್ರ ತೆಗೆಯುವ ತರಬೇತಿ.
  • ಉತ್ತಮ ಗಣಪತಿ ಸ್ಪರ್ಧೆಯಲ್ಲಿ ಪಟಾಕಿ ರಹಿತ ಮಂಡಳಿಗೆ ಪ್ರಥಮ ಆದ್ಯತೆ.
  • ಪ್ರತಿದಿನದ ಮಧ್ಯಾಹ್ನದ ಪೂಜೆಯ ವೇಳೆ ಸ್ಥಳೀಯ ಒಬ್ಬ ಪತ್ರಿಕಾ ಪ್ರತಿನಿಧಿ, ಸರಕಾರಿ ಅಧಿಕಾರಿ, ಪೌರಕಾರ್ಮಿಕ, ಪತ್ರಿಕೆ ಹಂಚುವ ವ್ಯಕ್ತಿ, ಅಂಗನವಾಡಿಯ ಸಿಬ್ಬಂದಿ, ಅಂಚೆ ಪೇದೆ, ಸರಕಾರಿ ಇಲಾಖೆಯ ಒಬ್ಬ ಗ್ರೂಪ್ ಡಿ ನೌಕರ, ಸರಕಾರಿ ಹಾಗೂ ಖಾಸಗಿ ವೈದ್ಯ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರು, ರಿಕ್ಷಾ ಚಾಲಕ, ಕಸದ ವಾಹನ ಚಾಲಕ, ಕೂಲಿ ಕಾರ್ಮಿಕ , ಪೊಲೀಸ್ ಪೇದೆ,ಇನ್ನಿತರ ಸಾರ್ವಜನಿಕ ಸೇವೆಯಲ್ಲಿ ಇರುವಂತಹ ಒಬ್ಬ ವ್ಯಕ್ತಿಗೆ ವಿಶೇಷ ಆಮಂತ್ರಣದೊಂದಿಗೆ ಶ್ರೀದೇವರ ಪ್ರಸಾದ. (ಫೋಟೋ ಶಾಲು ರಹಿತ)
  • ಗಣಪತಿಯ ವಿಸರ್ಜನಾ ಮೆರವಣಿಗೆಯ ಮುಂಚೂಣಿಯಲ್ಲಿ ಸಮವಸ್ತ್ರಧಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಪಡೆ ಮತ್ತು ಎನ್ ಸಿ ಸಿ, ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಮುಂಚೂಣಿಯಲ್ಲಿ ಇರುವ ಅವಕಾಶ.
  • ಕಾನೂನಿನಲ್ಲಿ ಅವಕಾಶವಿದ್ದರೆ ಶ್ರೀ ಗಣಪತಿಯ ಎದುರಿಗೆ ಸಶಸ್ತ್ರ ಪಡೆಗಳಿಂದ ಗಾರ್ಡ್ ಆಫ್ ಆನರ್.
  • ಗಣಪತಿ ಮಂಡಳದ ಪೆಂಡಾಲ್‌ನಲ್ಲಿ ಪ್ರತಿದಿನ ಒಂದರಂತೆ ಸ್ಥಳೀಯ ಸುದ್ದಿ ಮಾಧ್ಯಮದವರಿಗೆ ಪ್ರದರ್ಶನಕ್ಕೆ ಅವಕಾಶ.
  • ಗಣಪತಿ ಮಂಡಳದ ಪೆಂಡಾಲ್‌ನಲ್ಲಿ ಪ್ರತಿದಿನ ಒಂದರಂತೆ ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳ ಸೇವಾ ಕಾರ್ಯ ಪ್ರದರ್ಶನಕ್ಕೆ ಅವಕಾಶ.
  • ಸರಕಾರಿ ಯೋಜನೆಗಳ ಮಾಹಿತಿಗೊಂದು ವ್ಯವಸ್ಥೆ.
  • ಎಲ್ಲ ಗಣಪತಿ ಮಂಡಳಗಳ ಸಮನ್ವಯತೆಯೊಂದಿಗೆ ಪ್ರತಿದಿನ ಒಂದು ಗಣಪತಿ ಎದುರಿಗೆ ಮಾತ್ರ ಅನ್ನದಾನದ ಆಯೋಜನೆ.
Share This
300x250 AD
300x250 AD
300x250 AD
Back to top