ಶಿರಸಿ: ಉಪಬೆಳೆಯಾಗುವ ಸಾಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು.
ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ ಮಾತನಾಡಿ, ಸಂಬಾರು ಬೆಳೆಗಳ ಮಹತ್ವ ವಿವರಿಸಿದರು. ಕುಳವೆ ಸೊಸೈಟಿ ಅಧ್ಯಕ್ಷ ಚಾರುಚಂದ್ರ ಶಾಸ್ತ್ರಿ ವಂದಿಸಿದರು. ಇದೇ ವೇಳೆ ಸಂಸ್ಥೆಯ ಸದಸ್ಯರಿಗೆ ಕಾಳುಮೆಣಸು ಹಾಗೂ ದಾಲ್ಚಿನ್ನಿ ಗಿಡಗಳನ್ನು ವಿತರಿಸಲಾಯಿತು.