ಶಿರಸಿ: ಗ್ರೀನ್ ಕೇರ್ (ರಿ.) ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ ಉತ್ತರ ಕನ್ನಡ, ಇಕೋ ಕೇರ್ (ರಿ.) ಶಿರಸಿ ಮತ್ತು ಸಂಕಲ್ಪ ಟ್ರಸ್ಟ್ ಶಿರಸಿ ಇವರ ಸಹಯೋಗದಲ್ಲಿ ಸೆ.14, ಶನಿವಾರದಂದು ಸಿದ್ದಾಪುರ ರಸ್ತೆಯಲ್ಲಿರುವ ಸುಯೋಗಾಶ್ರಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಡಾ. ನವೀನ್ ಕುಮಾರ್ ಧಾರವಾಡ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ಕೇರ್ (ರಿ.) ಸಂಸ್ಥೆಯ ಅಧ್ಯಕ್ಷರಾದ ಹಾಗೂ ಆರೋಗ್ಯ ಕಾರ್ಯಕ್ರಮ ಅಧಿಕಾರಿ, (WadhwaniAI), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ನವದೆಹಲಿಯ ಡಾ. ಶ್ಯಾಮಸುಂದರ್ ಎಸ್. ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಯೋಗಾಶ್ರಯದ ಮುಖ್ಯಸ್ಥರಾದ ಶ್ರೀಮತಿ ಲತಿಕಾ ಭಟ್ಟ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಹೇಶ್ ಡಿ. ನಾಯಕ ಉಪಸ್ಥಿತರಿದ್ದರು.
ಸುಯೋಗಾಶ್ರಯದ ಮುಖ್ಯಸ್ಥರಾದ ಶ್ರೀಮತಿ ಲತಿಕಾ ಭಟ್ ಮಾತನಾಡಿ ನಮ್ಮ ಆಶ್ರಮದಲ್ಲಿ ಯಾವಾಗಲೂ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿರುವ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ ಶುಭ ಹಾರೈಸಿದರು. ಕಾರ್ಯಕ್ರಮದ ಅತಿಥಿಗಳಾಗಿ ಐ.ಸಿ.ಟಿ.ಸಿ. ಕೌನ್ಸಿಲರ್ ಆದ ಶ್ರೀಮತಿ ಗಿರಿಜಾ ಈಶ್ವರ ಹೆಗಡೆ, ಇಕೋ ಕೇರ್ ಸಂಸ್ಥೆಯ ಅಧ್ಯಕ್ಷರಾದ ಸುನಿಲ್ ಭೋವಿಯವರು, ಗ್ರೀನ್ ಕೇರ್ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಶಾಂತ್ ಮುಳೆ, ಸಂಕಲ್ಪ ಟ್ರಸ್ಟಿನ ಅಧ್ಯಕ್ಷರಾದ ಕುಮಾರ್ ಪಟಗಾರ, ಗ್ರೀನ್ ಕೇರ್ ಸಂಸ್ಥೆಯ ಬಿ.ಎಮ್. ಪ್ರಭುದೇವ್, ಶಿರಸಿಯ ರಾಜು ಚಾಟ್ಸ್ ಮಾಲೀಕರಾದ ರಾಜು ಎನ್. ಮಠದ್ ಮತ್ತು ಈಕೋ ಕೇರ್ ಸಂಸ್ಥೆಯ ಸದಸ್ಯರಾದ ರಾಜೇಶ್ ಶೇಟ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಡಾ. ಶ್ಯಾಮ್ ಸುಂದರ್. ಎಸ್. ಮತ್ತು ಡಾ. ನವೀನ್ ಕುಮಾರ್ ಅವರು ಎಲ್ಲಾ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿದರು. ಶ್ರೀಮತಿ ಗಿರಿಜಾ ಹೆಗಡೆ ಮತ್ತು ಗ್ರೀನ್ ಕೇರ್ ಸಂಸ್ಥೆ ಜಿತೇಂದ್ರ ಕುಮಾರ್ ಆಶ್ರಮದ ಎಲ್ಲಾ ಹಿರಿಯರ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಮಾಡಿದರು. ನಂತರ ವೈದ್ಯರು ಸೂಚಿಸಿದ ಸೂಕ್ತ ಔಷಧಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಸದಸ್ಯರಾದ ಉದಯ ಜಯಪ್ಪನವರ್, ಯಶ್ವಂತ್ ನಾಯ್ಕ ಮತ್ತು ಜೆ.ಕೆ. ಎಂಟರ್ಪ್ರೈಸಸ್ ನ ವ್ಯವಸ್ಥಾಪಕರಾದ ಮಹಾಂತೇಶ್ ಪ್ರಭುದೇವ್ ಮತ್ತು ಗ್ರೀನ್ ಕೇರ್ ಸಂಸ್ಥೆಯ ಸಿಬ್ಬಂದಿಯವರಾದ ಅಪ್ಸನಾ ಕಲಂದರ್ ಸಾಬ್ ಉಪಸ್ಥಿತರಿದ್ದರು. ಶಿಬಿರದ ನಂತರ ಎಲ್ಲಾ ಹಿರಿಯ ನಾಗರಿಕರಿಗೆ ರಾಜು ಚಾಟ್ಸ್ ಮಾಲೀಕರಾದ ರಾಜು. ಎಂ. ಮಠದ್ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿದ್ದರು ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ತೋನ್ಸೆಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.