ಸಿದ್ದಾಪುರ: ತಾಲೂಕಿನ ಕ್ಯಾದಗಿಯ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 18.11ಲಕ್ಷ ರೂಗಳಷ್ಟು ನಿವ್ವಳ ಲಾಭಹೊಂದಿದ್ದು ಎಂದು ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ ಹೇಳಿದರು.
ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು ಸಂಘವು 1976ರಲ್ಲಿ ಸ್ಥಾಪನೆಯಾಗಿ ಕ್ಯಾದಗಿ ಮತ್ತು ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ 14ಗ್ರಾಮಗಳನ್ನು ಹೊಂದಿದ್ದು ಸಂಘದ ವ್ಯಾಪ್ತಿಯ ಸದಸ್ಯರಿಗೆ ಹಾಗೂ ರೈತರಿಗೆ ಅಗತ್ಯ ಸೇವೆಗಳನ್ನು ನೀಡುತ್ತ ಸದೃಡವಾಗಿ ಬೆಳೆದುನಿಂತಿದೆ. ಸಂಘದಲ್ಲಿ 2ಕೋಟಿಯಷ್ಟು ಶೇರು ಬಂಡವಾಳ ಇದ್ದು 51ಲಕ್ಷ ರೂಗಳಷ್ಟು ಕಾಯ್ದಿಟ್ಟ ನಿದಿ ಹಾಗೂ 1ಕೋಟಿ 66ಲಕ್ಷರೂಗಳಷ್ಟು ಇತರೆ ನಿದಿಯನ್ನು ಹೊಂದಿದೆ. 7ಕೋಟಿ 29ಲಕ್ಷ ರೂಗಳಷ್ಟು ಠೇವುಗಳನ್ನು ಹೊಂದಿದೆ. 24ಕೋಟಿ 74ಲಕ್ಷ ರೂಗಳಷ್ಟು ದುಡಿಯುವ ಬಂಡವಾಳವನ್ನು ಹೊಂದಿದೆ.
ಸಂಘದ ಮುಖಾಂತರ ಸದಸ್ಯರು 1974.38 ಕ್ವಿಂಟಲ್ ಮಹಸೂಲುಗಳನ್ನು ವಿಕ್ರಿಮಾಡಿದ್ದು ಸುಮಾರು 6ಕೋಟಿ 82ಲಕ್ಷದ 86ಸಾವಿರದ 922ರೂಗಳಾಗಿದೆ. ಸಂಘದಲ್ಲಿ ಅಂತ್ಯ ಸಂಸ್ಕಾರ ನಿಧಿ ಯೋಜನೆ ಜಾರಿಗೊಳಿಸಲಾಗಿದ್ದು 17ಸದಸ್ಯರ ಕುಟುಂಬಕ್ಕೆ ತಲಾ ಹತ್ತು ಸಾವಿರುಗಳನ್ನು ನೀಡಲಾಗಿದೆ.
ನೂತನ ಕಟ್ಟಡ: ಸಂಘವು 1ಕೋಟಿ 27ಲಕ್ಷ ರೂಗಳಲ್ಲಿ ಸುಸಜ್ಜಿತವಾದ ನೂತನ ಕಟ್ಟಡವನ್ನು ತನ್ನ ಸ್ವಂತ ಬಂಡವಾಳದಿಂದ ನಿರ್ಮಾಣಮಾಡಿದ್ದು ಇದರೊಂದಿಗೆ ನವಂಬರ್. 2023ರಿಂದ ಸೂಪರ್ ಮಾರ್ಕೆಟ್ ಸಹ ನಡೆಸಲಾಗುತ್ತಿದ್ದು ನಿರೀಕ್ಷೆಗೂ ಮೀರಿ ವ್ಯವಹಾರ ನಡೆಯುತ್ತಿರುವುದು ಸಂಘದ ಪ್ರಗತಿಗೆ ಹೆಚ್ಚು ಕಾರಣವಾಗಿದೆ. ಸೂಪರ್ ಮಾರ್ಕೆಟ್ನಿಂದ ಸಂಘಕ್ಕೆ ಶೇ.7ರಂತೆ ಲಾಭಗಳಿಸುತ್ತಿದೆ. ಸಂಘವು ಹಳ್ಳಿಬೈಲಿನಲ್ಲಿ ಒಂದು ಶಾಖೆ ಹೊಂದಿದ್ದು ಅಲ್ಲಿಯೂ ಸಹ ಸಂಘದ ಸದಸ್ಯರಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಹಣಕಾಸಿನ ಹಾಗೂ ಕಿರಾಣಿವ್ಯವಹಾರ ನಡೆಸುತ್ತ ಆಭಾಗದ ಜನರಿಗೆ ಸನುಕೂಲವಾಗುವ ಹಾಗೆ ಸೇವೆಯನ್ನು ಒದಗಿಸಲಾಗುತ್ತಿದೆ.
ಸಂಘವು 2022-23ರಲ್ಲಿ 29ಲಕ್ಷದ 97ಸಾವಿರ ರೂಗಳಷ್ಟು ಲಾಭಗಳಿಸಿತ್ತು. ಈ ವರ್ಷ ಹೊಸದಾಗಿ ಕಟ್ಟಡ ನಿರ್ಮಾಣಮಾಡಿರುವುದರಿಂದ ಕಟ್ಟಡ ನಿರ್ಮಾಣಕ್ಕೆ 16ಲಕ್ಷ 91ಸಾವಿರ ರೂಗಳಷ್ಟು ಸವಕಳಿ ತೆಗೆದಿರುವುದರಿಂದ ಈ ವರ್ಷ 18ಲಕ್ಷದ 11ಸಾವಿರ ರೂಗಳಷ್ಟು ಲಾಭಗಳಿಸಿದೆ ಎಂದು ಸ್ಪಷ್ಟಪಡಿಸಿದರು.
ಈ ವರ್ಷದ ಮಳೆ-ಗಾಳಿಯಿಂದಾಗಿ ರೈತರ ಆರ್ಥಿಕ ಬೆಳೆಯಾದ ಅಡಕೆಗೆ ವಿಪರೀತ ಕೊಳೆರೋಗ ಹರಡಿ ಶೇ.60ರಷ್ಟು ಬೆಳೆ ನಾಶ ವಾಗಿದೆ. ಈ ಕುರಿತು ಈಗಾಗಲೇ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ಮನವಿ ನೀಡಲಾಗಿದೆ. ಈ ಕುರಿತು ಶಾಸಕರು ಸರ್ಕಾರದ ಗಮನಕ್ಕೆ ತರುತ್ತೆನೆ ಎಂದು ಎಂ.ಜಿ.ನಾಯ್ಕ ಹಾದ್ರಿಮನೆ ತಿಳಿಸಿದರು.
ಸರ್ವಸಾಧಾರಣ ಸಭೆ: ಸೆ.14ರಂದು ಬೆಳಗ್ಗೆ 10 ಗಂಟೆಗೆ ಸಂಘದ ಸಭಾಭವನದಲ್ಲಿ ಸರ್ವಸಾಧಾರಣ ಸಭೆ ನಡೆಯಲಿದ್ದು ಈ ಸಂದರ್ಭದಲ್ಲಿ 21ಜನ ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಸಂಘದಲ್ಲಿ ಹೆಚ್ಚು ಕಿರಾಣಿ ಖರೀಧಿ ಮಾಡಿದ ಮೂರು ಜನ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಲಾಗವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಗಣೇಶ ಭಟ್ಟ ಕೆರೆಹೊಂಡ, ಸದಸ್ಯರಾದ ಪರಮೇಶ್ವರ ನಾಯ್ಕ, ವೆಂಕಟೇಶ ಗೌಡ, ಗಣಪತಿ ನಾಯ್ಕ, ಲಕ್ಷ್ಮಣ ನಾಯ್ಕ, ಸುಬ್ರಾಯ ಹೆಗಡೆ, ಕೆ.ಪಿ.ರಘುಪತಿ, ರವಿ ನಾಯ್ಕ, ಭಾರತಿ ಭಟ್ಟ, ವಿಜಯಾ ನಾಯ್ಕ ಹಾಗೂ ವೃತ್ತಿಪರ ನಿರ್ದೇಶಕರಾದ ರಾಮಚಂದ್ರ ಹೆಗಡೆ, ಗೌರ್ಯ ನಾಯ್ಕ ಮತ್ತು ಸಂಘದ ಮುಖ್ಯಕಾರ್ಯನಿರ್ವಾಹಕ ಮಂಜುನಾಥ ಗೌಡ ಹಾಗೂ ಸಿಬ್ಬಂದಿಗಳಿದ್ದರು.