ಸಿದ್ದಾಪುರ: ತಾಲೂಕಿನ ಆಲ್ಮನೆ-ಗದ್ದೆಮನೆ ಗಣೇಶೋತ್ಸವ ಯುವಕ ಸಮಿತಿ ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾಜಿ ಶಾಸಕಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅವರು ಬುಧವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರನ್ನು ಯುವಕ ಸಮಿತಿಯಿಂದ ಗೌರವಿಸಲಾಯಿತು. ಯುವಕ ಸಮತಿಯ ಪದಾಧಿಕಾರಿಗಳು, ಪ್ರಮುಖರಾದ ಕೆ.ಜಿ.ನಾಯ್ಕ ಹಣಜೀಬೈಲ್, ತಿಮ್ಮಪ್ಪ ಎಂ.ಕೆ, ಗುರುಪ್ರಸಾದ ಹೆಗಡೆ, ಶಾಂತಕುಮಾರ ಭಟ್, ಕೆ.ಆರ್.ವಿನಾಯಕ, ದಯಾನಂದ ನಾಯ್ಕ ಕಡಕೇರಿ ಇತರರಿದ್ದರು.
ಗದ್ದೆಮನೆ ಗಣೇಶೋತ್ಸವದಲ್ಲಿ ರೂಪಾಲಿ ನಾಯ್ಕ್ ಭಾಗಿ
