Slide
Slide
Slide
previous arrow
next arrow

ಜಿಲ್ಲಾಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ: ಶಿರಸಿ ತಾಲೂಕಿಗೆ ಸಮಗ್ರ ಪ್ರಶಸ್ತಿ

300x250 AD

ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಶಿರಸಿ ಶೈಕ್ಷಣಿಕ ಜಿಲ್ಲೆ ವತಿಯಿಂದ  ನಡೆದ ಜಿಲ್ಲಾಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಯಲ್ಲಿ ಶಿರಸಿ ಸ್ಥಳೀಯ ಸಂಸ್ಥೆಯು ಅಮೋಘ ಸಾಧನೆ ಮಾಡಿರುತ್ತದೆ.

 ಲಯನ್ಸ್ ಪ್ರೌಢಶಾಲೆಯು ಸ್ಕೌಟ್ಸ್ ವಿಭಾಗದಲ್ಲಿ ಹಾಗೂ ಚಂದನ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಗೈಡ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಸ್ಕೌಟ್ ಮಾಸ್ಟರ್‌ಗಳಿಗಾಗಿ ನಡೆದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಲಯನ್ಸ್ ಪ್ರೌಢಶಾಲೆಯ ರಾಘವೇಂದ್ರ ಹೊಸೂರು ಪ್ರಥಮ ಸ್ಥಾನ, ಜಿಎಚ್‌ಪಿಎಸ್ ಮಾಡನಕೇರಿಯ ಎನ್.ಎಸ್.ಭಾಗ್ವತ್ ದ್ವಿತೀಯ ಸ್ಥಾನ, ಗೈಡ್ಸ್ ವಿಭಾಗದಲ್ಲಿ ಹೆಗಡೆಕಟ್ಟಾ ಪ್ರೌಢಶಾಲೆಯ ಶ್ರೀಮತಿ ವೀಣಾ ಭಟ್ ದ್ವಿತೀಯ ಸ್ಥಾನ ಹಾಗೂ ಜಿ‌ಎಚ್‌ಪಿಎಸ್ ಯಡಳ್ಳಿಯ ಶ್ರೀಮತಿ ಯಮುನಾ ಪೈ ತೃತೀಯ ಸ್ಥಾನ ಪಡೆದಿರುತ್ತಾರೆ.ರೇಂಜರ್ಸ್ ವಿಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ದ್ವಿತೀಯ ಸ್ಥಾನ ಪಡೆದಿರುತ್ತದೆ.

300x250 AD

 ವಿಜೇತರಿಗೆ ಶಿರಸಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎನ್ಎಸ್ ಭಾಗ್ವತ್ ಅಭಿನಂದನೆ ಸಲ್ಲಿಸಿರುತ್ತಾರೆ.

Share This
300x250 AD
300x250 AD
300x250 AD
Back to top