Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಅವಿಸ್ಮರಣೀಯ ‘ಗುರುವಂದನೆ’

300x250 AD

ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಶಿರಸಿ ಲಯನ್ಸ್ ಎಜುಕೇಶನ್ ಸೊಸೈಟಿ ಅವರ ಸಹಯೋಗದಲ್ಲಿ ಅರ್ಥಪೂರ್ಣ ಹಾಗೂ ಭಾವಪೂರ್ಣವಾದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ನೆರವೇರಿತು. ಸೆ.5 ಗುರುವಾರದಂದು ಲಯನ್ಸ್ ಸಭಾಂಗಣದಲ್ಲಿ ಅವಿಸ್ಮರಣೀಯ ಕ್ಷಣ ಸೃಷ್ಟಿಯಾಗಿತ್ತು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಗುರುವನ್ನು ಪ್ರಾರ್ಥಿಸಿ, ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರತಿವರ್ಷದಂತೆ ಶಿರಸಿ ಲಯನ್ಸ್ ಕ್ಲಬ್ ಈ ವರ್ಷವೂ ಕೂಡ ಶಿರಸಿ ಲಯನ್ಸ್ ಶಾಲೆ ಮತ್ತು ಭಾಸ್ಕರ ಸ್ವಾದಿ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಶಿಕ್ಷಕ ವೃಂದಕ್ಕೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಅಶ್ವತ್ ಹೆಗಡೆ, ಕೋಶಾಧಿಕಾರಿಯಾದ ಲಯನ್ ವೇಣುಗೋಪಾಲ ಹೆಗಡೆ, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾದ ಎಂ ಜೆ ಎಫ್ ಲಯನ್ ವಿನಾಯಕ ಭಾಗ್ವತ, ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂಜೆಎಫ್ ಪ್ರಭಾಕರ ಹೆಗಡೆ ಹಾಗೂ ಗೌರವ ಕಾರ್ಯದರ್ಶಿಗಳು ಲಯನ್ ಪ್ರೊಫೆಸರ್ ರವಿ ನಾಯಕ, ಅಭ್ಯಾಗತರಾದ ನಿವೃತ್ತ ಕನ್ನಡ ಶಿಕ್ಷಕ ಜಿ. ಕೆ. ಭಟ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಯನ್ ಅಶ್ವಥ್ ಹೆಗಡೆ ಅವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳ ಪರಿಚಯವನ್ನು ಮಾಡಿ ಸನ್ಮಾನಿಸಿದರು. ಅನಿಲ್ ಅಬ್ಬಿಯವರು ಶಿಕ್ಷಕರಿಗಾಗಿ ಇರಿಸಿದ ದತ್ತಿನಿಧಿಗೆ ಶ್ರೀಮತಿ ರೇಷ್ಮಾ ಮಿರಾಂಡ ಹಾಗೂ ಎನ್ ವಿ ಜಿ ಭಟ್ ಶಿಕ್ಷಕರಿಗಾಗಿ ಇರಿಸಿದ ದತ್ತಿನಿಧಿಗೆ ಗಣಪತಿ ಗೌಡ ಮತ್ತು ಶ್ರೀಮತಿ ವೀಣಾ ಸಿರ್ಸಿಕರ್ ಅವರು ರೇಖಾ ಶಿವಾನಂದ ನಾಯ್ಕ ಶಿಕ್ಷಕರಿಗಾಗಿ ಇರಿಸಿದ ದತ್ತಿನಿಧಿಗೆ ಕಾಲೇಜು ವಿಭಾಗದ ಉಪನ್ಯಾಸಕಿ ಶ್ರೀಮತಿ ಸ್ಮಿತಾ ನಾಯ್ಕ್ ಇವರು ಹಾಗೂ ಎಮ್. ಜೆ. ಎಫ್. ಲಯನ್. ಡಾಕ್ಟರ್ ಅಶೋಕ್ ಹೆಗಡೆ ಇವರು ತಮ್ಮ ತಾಯಿಯಾದ ರಾಧಾ ಹೆಗಡೆ ಇವರ ಹೆಸರಿನಲ್ಲಿ ನೀಡುವ ಪ್ರೋತ್ಸಾಹ ನಿಧಿಗೆ ಶ್ರೀಮತಿ ಲಕ್ಷ್ಮಿ ಪ್ರದೀಪ ಇವರು ಭಾಜನರಾಗಿದ್ದಾರೆ. ಶೇಕಡ ನೂರಕ್ಕೆ ನೂರು ಫಲಿತಾಂಶವನ್ನು ಸಾಧಿಸಿದ ಶಿಕ್ಷಕರಿಗೆ ಗೌರವ ಧನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಕುಮಾರಿ ಪೃಥ್ವಿ ಹೆಗಡೆ ಹಾಗೂ ಕುಮಾರ ಆದಿತ್ಯ ನಾಯ್ಕ್ ಕುಮಾರಿ ಸೌಖ್ಯಾ ಹೆಗಡೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರ ಪರವಾಗಿ ಗಣಪತಿ ಗೌಡ ಮತ್ತು ಶ್ರೀಮತಿ ಸ್ಮಿತಾ ನಾಯ್ಕ್ , ಪ್ರಾಂಶುಪಾಲರಾದ ಶಶಾಂಕ ಹೆಗಡೆ ಅವರು ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು. ಮುಖ್ಯ ಅಭ್ಯಾಗತರಾದ ಜಿ. ಕೆ .ಭಟ್ ಅವರು ಸತ್ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಓದಿನ ಜೊತೆಗೆ ಆಟವನ್ನು ಬೆಳೆಸಿಕೊಂಡರೆ ಗುರಿ ಮುಟ್ಟಲು ಸಾಧ್ಯ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿರುವ ಗಣ್ಯರು ಶುಭಾಶಿರ್ವಾದವನ್ನು ಗೈದರು. ಎಂ. ಜೆ .ಎಫ್.ವಿನಾಯಕ ಭಾಗ್ವತ ಅವರು ಎಲ್ಲರನ್ನೂ ವಂದಿಸಿದರು. ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆಯನ್ನು ಮಾಡಿ ಸಿಹಿಯನ್ನು ತಿನ್ನಿಸಿ ಸಂಸ್ಕೃತಿಯನ್ನು ಮೆರೆದಿದ್ದಾರೆ. ಇದಕ್ಕೆ ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಮತ್ತು ಶ್ರೀಮತಿ ಚೇತನ ಪಾವಸ್ಕರ ಮಾರ್ಗದರ್ಶನವನ್ನು ನೀಡಿರುತ್ತಾರೆ. ಕಾರ್ಯಕ್ರಮವನ್ನು ಲಯನ್. ಅಶ್ವತ್ ಹೆಗಡೆ ಮುಳಖಂಡ ಹಾಗೂ ಲಯನ್. ಜ್ಯೋತಿ ಅಶ್ವತ್ಥ ಹೆಗಡೆ ಇವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top