Slide
Slide
Slide
previous arrow
next arrow

ಮೂಲ ಮಾಲೀಕರಿರದಿದ್ದಲ್ಲಿ ವಾರಸುದಾರರಿಗೆ ಆಶ್ರಯ ಮನೆಗಳ ಮಾಲೀಕತ್ವ ನೀಡಿ ಬಿಜೆಪಿ ಮನವಿ

300x250 AD

ದಾಂಡೇಲಿ : ಆಶ್ರಯ ಮನೆಗಳನ್ನು 20 ವರ್ಷ ಕಳೆದ ನಂತರ ಮಾಲಿಕತ್ವ ಮಾಡಲು ಮೂಲ ಮಾಲೀಕರು ಇಲ್ಲದಿರುವ ಪಕ್ಷದಲ್ಲಿ ವಾರಸುದಾರರಿಗೆ ಆಶ್ರಯ ಮನೆಯ ಮಾಲೀಕತ್ವ ಮಾಡಿಕೊಡಬೇಕೆಂದು ನಗರ ಸಭೆ ಪೌರಾಯುಕ್ತರಿಗೆ ಬಿಜೆಪಿ ದಾಂಡೇಲಿ ಘಟಕವು ಸೋಮವಾರ ನಗರಸಭೆಯಲ್ಲಿ ಪೌರಾಯುಕ್ತರಿಗೆ ಮನವಿಯನ್ನು ನೀಡಿತು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಬುದವಂತಗೌಡ ಪಾಟೀಲ್ ಅವರು ಕಳೆದ 20 ವರ್ಷಗಳ ಹಿಂದೆ ಬಡವರಿಗೆ ಕೊಟ್ಟಿರುವ ಆಶ್ರಯ ಮನೆಗಳ ಪಟ್ಟಾದ ಕುರಿತಂತೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಕಾಲಾವಕಾಶ ಮುಗಿದಿರುತ್ತದೆ. ಅದರಂತೆ ಮೂಲ ಮಾಲೀಕರಿಗೆ ಮಾಲೀಕತ್ವ ಮಾಡಿಕೊಡುತ್ತಿದ್ದು ಇದು ಅಭಿನಂದನೀಯ. ಈಗ ಅದರ ಮೂಲ ಮಾಲೀಕರು ಮೃತಪಟ್ಟಿದ್ದಲ್ಲಿ ಅಥವಾ ಆ ಮನೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದಲ್ಲಿ ಅಂತಹ ಆಶ್ರಯ ಮನೆಗಳಲ್ಲಿ ಈಗ ವಾಸಿಸುತ್ತಿರುವ ಅವರ ವಾರಸುದಾರರಿಗೆ ಅಥವಾ ಅಲ್ಲಿರುವ ಅನುಭೋಗದಾರರ ಹೆಸರಿಗೆ ಮಾಲೀಕತ್ವ ಮಾಡಿಕೊಡಬೇಕೆಂದು ಪೌರಾಯುಕ್ತರಲ್ಲಿ ಮನವಿ ಮಾಡಿದರು.

300x250 AD

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುಧಾಕರ ರೆಡ್ಡಿ. ಯುವ ಮೋರ್ಚಾ ಅಧ್ಯಕ್ಷ ಪವನ್ ಕೊಣ್ಣೂರ, ನಗರ ಸಭೆಯ ಸದಸ್ಯ‌ರಾದ ದಶರಥ ಬಂಡ್ಡಿವಡ್ಡರ, ರಮಾ ರವೀಂದ್ರ, ಪಕ್ಷದ ಪ್ರಮುಖರಾದ ಪ್ರಶಾಂತ್ ಬರ್ಸೂತೆಕರ್, ವಿಷ್ಣು ನಾಯರ್, ಶಿವಾನಂದ ಗಗ್ಗರಿ, ಚನ್ನಬಸಪ್ಪ ಮುರಗೋಡ, ಗೀತಾ ಶೀಕಾರಿಪುರ ಹಾಗೂ ಪಕ್ಷದ ಇನ್ನಿತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top