Slide
Slide
Slide
previous arrow
next arrow

ಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರ‌ಗೆ ಶ್ರೇಷ್ಠ ಸಂಶೋಧಕ ಪ್ರಶಸ್ತಿ

300x250 AD

ಯಲ್ಲಾಪುರ: ತಾಲೂಕಿನ ಗೇರಕೊಂಬೆಯ ಪಶುವೈದ್ಯಕೀಯ ವಿಜ್ಞಾನಿ ಡಾ.ಎನ್.ಬಿ.ಶ್ರೀಧರ ಅವರಿಗೆ ಬೀದರ್‌ನ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರ ಸಂಘದಿಂದ ಶ್ರೇಷ್ಠ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೇರುಕೊಂಬೆಯ ನಾರಾಯಣ ಭಟ್ಟ ಮತ್ತು ಪಾರ್ವತಿ ಇವರ ಮಗನಾದ ಡಾ.ಶ್ರೀಧರ, ಪಶುವೈದ್ಯಕೀಯ ವಿಜ್ಞಾನಿ, ಸಾಹಿತಿ, ಚಿಂತಕ, ಬರಹಗಾರರಾಗಿದ್ದಾರೆ. ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಉತ್ತಮ ಸಂಶೋಧನೆಗಳ ಯಶೋಗಾಥೆಯನ್ನು ಗುರುತಿಸಿ, ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.‌
‌‌
ಪಶುವೈದ್ಯಕೀಯ ರಂಗದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯವನ್ನು ಬೋಧನೆ ಮಾಡಿದ್ದಾರೆ. 200 ಕ್ಕೂ ಹೆಚ್ಚಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ಶಿಲೀಂಧ್ರ ವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಸಹಸ್ರಾರು ಜಾನುವಾರುಗಳ ಉಳಿವಿಗೆ ಕಾರಣರಾಗಿದ್ದಾರೆ.
ಅನುತ್ಪಾದಕ ಗೋವುಗಳನ್ನು ಆಯ್ದ ಚಿಕಿತ್ಸಾ ವಿಧಾನವನ್ನು ಗ್ರಾಮ ಮಟ್ಟದಲ್ಲಿ ಅಳವಡಿಸಿ, ಅವುಗಳನ್ನು ಉತ್ಪಾದಕತೆಯತ್ತ ಕೊಂಡೊಯ್ದಿರುವ, ಅವುಗಳನ್ನು ಕಟುಕರ ಕತ್ತಿಯಿಂದ ತಪ್ಪಿಸುವ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top