Slide
Slide
Slide
previous arrow
next arrow

ಹೆಗಡೆಕಟ್ಟಾದಲ್ಲಿ 38ನೇ ವರ್ಷದ ಗಜಾನನೋತ್ಸವ

300x250 AD

ಶಿರಸಿ: ತಾಲೂಕಿನ ಹೆಗಡೆಕಟ್ಟಾದ ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ಗಣೇಶೋತ್ಸವಕ್ಕೆ 38ನೆಯ ವರ್ಷದ ಸಂಭ್ರಮ. ಸೆ.7 ಶನಿವಾರ ಬೆಳಗ್ಗೆ 11-00 ಗಂಟೆಗೆ ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ, ಪೂಜೆ, ಮಂಗಳಾರತಿ, ಸೆ.8 ರವಿವಾರ ಮಧ್ಯಾಹ್ನ 12-00 ಗಂಟೆಗೆ ಪೂಜೆ, ಮಧ್ಯಾಹ್ನ 3-00 ಗಂಟೆಗೆ ಮಹಾಮಂಗಳಾರತಿ, ಮೆರವಣಿಗೆ, ಶ್ರೀ ಗಣಪತಿ ವಿಸರ್ಜನೆ, ಮುಕ್ತಾಯಗೊಳ್ಳಲಿದೆ. 

ರಾಮ ಮರಾಠಿ ಮತ್ತು ಲಕ್ಷ್ಮಣ ಮರಾಠಿ, ಹಕ್ಕಿಗದ್ದೆ ಗಣಪತಿ ಮೂರ್ತಿ ತಯಾರಿಸಿದ್ದು ಗಣಪತಿ ಮೂರ್ತಿಯ ಸೇವೆ ಮಧಸೂದನ ಮತ್ತು ಕು. ಸೂರ್ಯನಾರಾಯಣ ದೇವರು ಭಟ್ಟ ಇವರದ್ದಾಗಿದೆ. ಮನರಂಜನಾ ಕಾರ್ಯಕ್ರಮಗಳು ಸೆ.7 ರ ಸಾಯಂಕಾಲ ನಡೆಯಲಿದ್ದು 5.00 ಗಂಟೆಗೆ ಮಕ್ಕಳಿಂದ ಛದ್ಮವೇಷ ಸಂಜೆ 6.00 ರಿಂದ ಸಂತ ಭದ್ರಗಿರಿ ಅಚ್ಯುತದಾಸರ ಶಿಷ್ಯ ಕಥಾ ಕೀರ್ತನ ಕೋವಿದ ಸಿರಿವಿಠಲಾಂಕಿತ ಈಶ್ವರದಾಸ ಕೊಪ್ಪೇಸರ ಇವರಿಂದ ಹರಿಕೀರ್ತನೆ ನಡೆಯಲಿದೆ ಈ ಎಲ್ಲ ಕಾರ್ಯಕ್ರಮಗಳಿಗೆ ಗುರುಪಾದ ಹೆಗಡೆ  ಅಮಚಿಮನೆ ಅಧ್ಯಕ್ಷರು, ಮಂಜುನಾಥ ಹೆಗಡೆ ಹೆಗಡೆಕಟ್ಟಾ ಎಸ್. ಎಂ. ಹೆಗಡೆ, ಮಕ್ಕಳತಾಯ್ಮನೆ ಗೌರವಾಧ್ಯಕ್ಷರು, ಕಾರ್ಯಕಾರಿ ಸಮಿತಿ. ಅನಂತ ದಾಸ ನಾಯ್ಕ, ಜಗಳೆಮನೆ ಗೌರವ ಕಾರ್ಯದರ್ಶಿ ಸ್ವಾಗತ ಕೋರಿದ್ದಾರೆ. 

300x250 AD
Share This
300x250 AD
300x250 AD
300x250 AD
Back to top