ಸಿದ್ದಾಪುರ: ತಾಲೂಕಿನ ಶ್ರೀಮನ್ನಲೆಮಾವಿನ ಮಠದಲ್ಲಿ ಶ್ರೀ ಶ್ರೀ ಮಾಧಮಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ, ಶ್ರೀ ಲಕ್ಷ್ಮೀನರಸಿಂಹ “ಸಂಸ್ಕೃತಿ ಸಂಪದ”ಇದರ ಆಶ್ರಯದಲ್ಲಿ,ಸೆ.1ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಶ್ರೀ ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅನೇಕ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಜಿ.ಆರ್. ಭಾಗವತ್ ಚಾರ್ಗಲ್ ಇವರು ಪ್ರಾರ್ಥನಾ ಶ್ಲೋಕವನ್ನು ಹೇಳಿ ಭಗವದ್ಗೀತೆಯ ಮಹತ್ವ ಮತ್ತು ಅದರ ಪ್ರಯೋಜನವನ್ನು ತಿಳಿಸಿದರು.
ನಿರ್ಣಾಯಕರಾಗಿ ಜಿ.ಟಿ.ಭಟ್, ಪವನ್ ಕುಮಾರ್ ಹಾಗೂ ಗಣಪತಿ ಜೋಶಿ ಇವರು ಸಹಕರಿಸಿದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ನಿಸರ್ಗ ಪ. ಭಟ್, ದ್ವಿತೀಯ ಬಹುಮಾನವನ್ನು ತನ್ಮಯಿ ಎಸ್.ಹೆಗಡೆ, ಹಾಗೂ ತೃತೀಯ ಬಹುಮಾನವನ್ನು ಸಾತ್ವಿಕ್ ಪ. ಭಟ್ಟ, ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಶಶಾಂಕ್ ಎಸ್. ಭಟ್, ಇವರು ಪಡೆದುಕೊಂಡರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಪ್ರಶಸ್ತಿ ಪತ್ರ ಮತ್ತು ಆಶೀರ್ವಾದ ಮಂತ್ರಾಕ್ಷತೆಯನ್ನು ನೀಡಿ ಮಕ್ಕಳನ್ನು ಹರಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಎಂ.ಹೆಗಡೆ ಹೆಗ್ಗನೂರು ಇವರು ಮಕ್ಕಳಿಗೆ ಬಹುಮಾನವನ್ನು ನೀಡಿದರು. ವಿನಾಯಕ್ ಭಟ್ ನೆಲೆಮಾವ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿಕೊಟ್ಟರು.