Slide
Slide
Slide
previous arrow
next arrow

ಕಲೆ,ಸಂಸ್ಕೃತಿ ಮೌಲ್ಯ ಬಿಟ್ಟು ಸ್ವೇಚ್ಛಾಚಾರಿಗಳಾದರೆ ಅಸ್ತಿತ್ವಕ್ಕೆ ಸಂಚಕಾರ: ಎಂ.ಆರ್.ಭಟ್

300x250 AD

ಸಿದ್ದಾಪುರ: ಕಲೆ ಮತ್ತು ಸಂಸ್ಕೃತಿಗಳು ನಮ್ಮ ಬದುಕಿನ ಜೀವಾಳ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ನಾವು ಎಷ್ಟೇ ಪ್ರಗತಿ ಸಾಧಿಸಿದರೂ ಮೂಲ ಬೇರನ್ನು ಬಿಟ್ಟು ಇರುವುದಕ್ಕೆ ಆಗುವುದಿಲ್ಲ. ಮನಸ್ಸು, ಬುದ್ದಿಗಳಿಗೆ ಸಂಸ್ಕಾರವನ್ನು ನೀಡುವ ಕಲೆ ಮತ್ತು ಸಂಸ್ಕೃತಿಯ ಮೌಲ್ಯ ಅಪರಿಮಿತವಾದುದು. ಅವುಗಳನ್ನು ಬಿಟ್ಟು ಸ್ವೇಚ್ಚಾಚಾರಿಗಳಾದರೆ ನಮ್ಮ ಅಸ್ಥಿತ್ವಕ್ಕೆ ಸಂಚಕಾರ ಬರುತ್ತದೆ ಎಂದು ಬಿದರಕಾನ ಸಹಿಪ್ರಾ ಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಭಟ್ಟ ಹೇಳಿದರು.

ತಾಲೂಕಿನ ಬಿದ್ರಕಾನ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಕಲಾ ಭಾಸ್ಕರ ಇಟಗಿ ಇವರು ಕೇಂದ್ರ ಸಂಸ್ಕೃತಿ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಸೇವಾಸಹಕಾರಿ ಸಂಘದ ಸಹಕಾರದೊಂದಿಗೆ ಆಯೋಜಿಸಿದ್ದ ಹೊಸ ಯಕ್ಷಕೃತಿ ಹನುಮದ್ವಿಲಾಸದ ಪ್ರಥಮ ಪ್ರದರ್ಶನ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.
ಜಾಗತಿಕವಾಗಿ ತುಂಬಾ ವಿಸ್ತಾರವಾಗಿ ತೆರದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನದಂತಹ ಕಲಾ ಪ್ರದರ್ಶನಗಳು ನಮ್ಮತನವನ್ನು ಉಳಿಸಿಕೊಡುತ್ತವೆ. ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾದ ಯಕ್ಷಗಾನವನ್ನು ಉಳಿಸಿ ಬೆಳೆಸಿಕೊಳ್ಳೋಣ ಎಂದು ಹೇಳಿದರು.

300x250 AD

ಬಿದ್ರಕಾನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನಕಲಾವಿದ ಕೃಷ್ಣಮೂರ್ತಿ ಭಟ್ಟ ಬಿದ್ರಕಾನ, ಕಲಾಪೋಷಕ ಹನುಮಂತ ಗೌಡ ಕೊಡಗಿಬೈಲು, ಎಸ್.ಎಂ. ಹೆಗಡೆ ಮುಂಡೂಸರ ಉಪಸ್ಥಿತರಿದ್ದರು.
ನಂತರ ಕವಿ ಪಾರ್ತಿಸುಬ್ಬ ವಿರಚಿತ ಲಂಕಾದಹನ ಯಕ್ಷಗಾನ ಪ್ರದರ್ಶನಗೊಂಡಿತು.ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ ಹಾಗೂ ಚೆಂಡೆಯಲ್ಲಿ ಸಂಪ ಲಕ್ಷ್ಮಿನಾರಾಯಣ ಸಹಕರಿಸಿದರು.
ಮುಮ್ಮೇಳದಲ್ಲಿ ವಿನಯ ಬೆರೊಳ್ಳಿ (ಹನುಮಂತ), ಶಂಕರ ಹೆಗಡೆ ನೀಲ್ಕೋಡ(ರಾವಣ),ಇಟಗಿ ಮಹಾಬಲೇಶ್ವರ ಭಟ್ಟ (ಶ್ರೀರಾಮ ಹಾಗೂ ಸೀತೆ),ನಾಗೇಂದ್ರ ಭಟ್ಟ ಮೂರೂರು(ಜಾಂಬವಂತ ಹಾಗೂ ದೂತ),ನಾಗಪತಿ ಹೆಗಡೆ ಕೊಪ್ಪ(ಸರಮೆ), ವೆಂಕಟೇಶ ಹೆಗಡೆ ಬೊಗರಿಮಕ್ಕಿ(ಲಂಕಿಣಿ),ನಿತಿನ್ ದಂಟಕಲ್(ಸುಗ್ರೀವ) ಹಾಗೂ ಅಭಯ ಹೆಗಡೆ ಹೊಸಗದ್ದೆ( ಇಂದ್ರಜಿತು) ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.
ಕಲಾಭಾಸ್ಕರ ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಕವಲಕೊಪ್ಪ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top