Slide
Slide
Slide
previous arrow
next arrow

ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಸಂಪೂರ್ಣ ವಿಫಲ: ಅರಣ್ಯವಾಸಿಗಳು ಅತಂತ್ರ: ರವೀಂದ್ರ ನಾಯ್ಕ   

300x250 AD

ಶಿರಸಿ: ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ೧೬ ವರ್ಷಗಳಾಗಿದ್ದರು ಕಾನೂನು ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅವರು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಆಶ್ರಯದಲ್ಲಿ ಕೊಪ್ಪ ತಾಲೂಕಿನ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಗ್ರಾಮದ ಶ್ರೀ ರೇಣುಕಾಚಾರ್ಯ ಸಮುದಾಯ ಭವನದ ರಂಭಾಪುರ ಮಠದಲ್ಲಿ ಮಲೆನಾಡಿನ ಬದುಕಿಗಾಗಿ ಚಿಂತನೆ ಎಂಬ ದಕ್ಷಿನ ಕನ್ನಡ, ಕೊಡಗು, ಚಿಕ್ಕಮಂಗಳೂರು, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಯ ಮಲೆನಾಡಿಗರ ಭಾಗದ ಬೃಹತ ಮಹತ್ವದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ವತಿರಿಕ್ತವಾಗಿ ಕಾನೂನು ವಿಧಿವಿಧಾನವನ್ನು ಅನುಸರಿಸದೆ ಕಾನೂನು ತಪ್ಪಾಗಿ ಅರ್ಥ್ಯೆಸುವಿಕೆಯಿಂದ ದೇಶದಲ್ಲಿ ಕರ್ನಾಟಕ ರಾಜ್ಯವು ಕಾನೂನು ಅನುಷ್ಠಾನ ದೇಶದಲ್ಲಿ ೧೬ ನೇ ಸ್ಥಾನದಲ್ಲಿರುವುದು ವಿಷಾದಕರ ಎಂದು ಅವರು ಹೇಳಿದರು.

ಆದಿಚುಂಚನಗಿರಿ ಶಾಖಾಮಠದ ಗುರುಗಳಾದ ಗುಣನಾತ ಸ್ವಾಮಿಜಿ ಮಾತನಾಡಿ ಪ್ರಕೃತಿ ವಿಕೋಪಕ್ಕೆ ರೈತರು ಕರಾರಣರಲ್ಲ. ರೈತರ ಸಮಸ್ಯೆ ಗಂಭೀರವಾಗಿದೆ ಎಂದರು. ರಂಬಾಪುರಿ ಶ್ರೀಗಳ ರೈತರ ಹೋರಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಸಂಚಾಲಕರಾದ ಸುಧೀರಕುಮಾರ ಮರೋಳ್ಳಿ ಮಾತನಾಡಿ ಮಲೆನಾಡಿನ ೩೬ ಶಾಸಕರನ್ನು ಒಗ್ಗೂಡಿಸಿ, ಇಲ್ಲಿಯ ಅರಣ್ಯ ಅತಿಕ್ರಮಣದಾರರ, ರೈತರ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ, ಕಸ್ತೂರಿರಂಗನ ವರದಿ ಅಪಾಯ ಅರಿಯ ಬೇಕಿದೆ.

300x250 AD

ರೈತ ಹೋರಾಟಗಾರರ ವಿಠ್ಠಲ ಹೆಗಡೆ ಮಾತನಾಡಿ ಅರಣ್ಯ ಮಂತ್ರಿಗಳು ಹೇಳಿಕೆಗಳು ರೈತರಿಗೆ ಆಂತಕ ಮೂಡಿಸಿದೆ. ನಾವೆಲ್ಲಾ ಸಂಘಟಿಕರಾಗಿ ಧ್ವನಿ ಎತ್ತಬೇಕು ಎಂದರು. ಹೋರಾಟಗಾರರಾದ ರಾಧಾ ಸುಂದರೇಶ, ನಾಗೇಶ, ನ್ಯಾಯವಾದಿ ಅನಂತದೇವ, ಪ್ರಮುಖರಾದ ಶಿವಕುಮಾರ, ರಾಘವೇಂದ್ರ ಕವಂಚೂರು, ಮರಿಯಪ್ಪ, ಕೆ.ಎಲ್.ಅಶೋಕ, ದಿಗಂತ, ಇತರರು ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ರವಿ ಹೊಸಕೊಪ್ಪ ಇದ್ದರು, ಶಾಸಕ ರಾಜೇಗೌಡರು ಮಾತನಾಡಿದ್ದರು. ಸಮಾರೋಪ ಸಭೆಯ ಭಾಷಣವನ್ನು ವೀರಸೋಮೇಶ್ವರ ಸ್ವಾಮೀಜಿ, ಬಾಳೆಹೊನ್ನುರು ಮಾತನಾಡಿ, ಹೋರಾಟಕ್ಕೆ ಮಠ ಬೆನ್ನೂಲುಬು ನಿಲ್ಲುತ್ತದೆ ಅಂತ ಹೇಳಿದರು.

ಹಕ್ಕುಪತ್ರ ವಿತರಣೆ ಶೇ. ೫.೩೫:
   ಕರ್ನಾಟಕದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ೨.೯೫೦೪೮ ಬಂದಿರುವಂತ ಅರ್ಜಿಗಳಲ್ಲಿ ಕೇವಲ ೧.೫೭೮೯ ಅರ್ಜಿಯಲ್ಲಿ ಮಾತ್ರ ಹಕ್ಕು ಪತ್ರ ದೊರಕಿ ಕಾಯಿದೆಯ ಫಲಾನುಭವಗಳ ಕೇವಲ ಶೇ.೫.೩೫ ಮಾತ್ರ ತಲುಪಿರುವುದು ವಿಷಾದಕರ ಎಂದು ಅವರು ಹೇಳಿದರು.

Share This
300x250 AD
300x250 AD
300x250 AD
Back to top