ಕುಮಟಾ: ಆ.29 ರಂದು ಕುಮಟಾ ತಾಲೂಕಿನ ಅಘನಾಶಿನಿ ಸಮುದ್ರದ ಬಳಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದ ಕುಮಟಾ ತಾಲೂಕಿನ ಕಾಗಲ್ನ ಮೀನುಗಾರ ವಿನೋದ್ ಶಂಕರ್ ಅಂಬಿಗಾ ಅವರ ಕುಟುಂಬಕ್ಕೆ, ರಾಜ್ಯದ ಮೀನುಗಾರಿಕೆ , ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು 8 ಲಕ್ಷ ರೂ.ಗಳ ಪರಿಹಾರದ ಆದೇಶಪತ್ರವನ್ನು ವಿತರಿಸಿದರು. ಹಾಗೂ ವೈಯಕ್ತಿಕ ವಾಗಿ ರೂ.50,000 ಗಳ ನೆರವು ನೀಡಿದರು.
ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ
