ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಆ.29, ಗುರುವಾರದಂದು ನಡೆದ ಕುಮಟಾ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಒಳಾಂಗಣ ಕ್ರೀಡಾಕೂಟದಲ್ಲಿ ಸರಸ್ವತಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಗೈದಿದ್ದಾರೆ.
ಬಾಲಕರ ಟೇಬಲ್ ಟೆನ್ನಿಸ್‌ನಲ್ಲಿ ಅಮಿತ್ ಪುರೋಹಿತ, ಸಾತ್ವಿಕ ಶೇಟ್, ತುಷಾರ ಮೇಸ್ತಾ, ಸಮರ್ಥ ಶೆಟ್ಟಿ, ಹಾಗೂ ಶಕ್ತಿ ತಂಡ ಪ್ರಥಮ ಸ್ಥಾನ, ಬಾಲಕಿಯರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಶರಣ್ಯಾ ನಾಯ್ಕ, ಬಿಂಬಾ ನಾಯ್ಕ, ವೈಷ್ಣವಿ ಉಪ್ಪಾರ, ಜಾಸ್ಮಿನ್ ಹಾಗೂ ವೇದಿಕಾ ತಂಡ ಪ್ರಥಮ ಸ್ಥಾನ, ಕರಾಟೆಯಲ್ಲಿ ಪ್ರಥ್ವಿನ್ ಶೆಟ್ಟಿ, ಆರ್ಜೊ ಖಾನ್, ಕೀರ್ತಿ ಭಟ್ ಹಾಗೂ ಪೂಜಾ ರಾಥೋಡ, ಪ್ರಥಮ ಸ್ಥಾನ, ಯೋಗದಲ್ಲಿ ಪಾವನಿ ನಾಯ್ಕ ಹಾಗೂ ಇಂಚರಾ ಭಂಡಾರಿ ಪ್ರಥಮ ಸ್ಥಾನ, ಚೆಸ್‌ನಲ್ಲಿ ಶ್ರೇಯಾ ಅಂಬಿಗ ಪ್ರಥಮ ಸ್ಥಾನ ಗಳಿಸಿದ್ದಾರೆ. ಬಾಲಕರ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಗಂಭೀರ ಕವಾರಿ, ಸಂಪತ ನಾಯಕ, ಆರ್ಯನ್ ನಾಯಕ, ಅನಂತ ಶಾನಭಾಗ ಹಾಗೂ ಮನೋಜ ನಾಯ್ಕ ತಂಡ ದ್ವೀತಿಯ ಸ್ಥಾನ, ಬಾಲಕಿಯರ ಟೇಬಲ್ ಟೆನ್ನಿಸ್ ನಲ್ಲಿ ಸಂಜನಾ, ಶ್ರಾವ್ಯಾ ಹಾಗೂ ಯೋಗಿತಾ ತಂಡ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ತಾಲ್ಲೂಕು ಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಪ್ರಾಚಾರ್ಯರಾದ ಕಿರಣ ಭಟ್ಟ, ಉಪಪ್ರಾಚಾರ್ಯರಾದ ಸುಜಾತಾ ಹೆಗಡೆ, ಕ್ರೀಡಾ ಸಂಯೋಜಕರುಗಳಾದ ದೀಪಕ ನಾಯ್ಕ, ದೀಕ್ಷಿತಾ ಕುಮಟಾಕರ, ವೇದಾ ನಾಯ್ಕ, ಸಂಸ್ಥೆಯ ದೈಹಿಕ ಶಿಕ್ಷಕರುಗಳಾದ ಜಯರಾಜ ಶೇರುಗಾರ, ನಾಗರಾಜ ಭಂಡಾರಿ, ಈಶ್ವರ ಗೌಡ, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದರು.