Slide
Slide
Slide
previous arrow
next arrow

ಪಕ್ಷ ತಾಯಿ‌ ಸಮಾನ, ಪಕ್ಷದ ಗೌರವಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ: ರೂಪಾಲಿ ನಾಯ್ಕ್ ಕರೆ

300x250 AD

ಬಿಜೆಪಿ ಸದಸ್ಯತ್ವ ಅಭಿಯಾನ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ

ಕಾರವಾರ: ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಹಾಗೂ ನಗರ ಕಾರ್ಯಕಾರಿಣಿ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಕಾರವಾರದ ಪಕ್ಷದ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀಮತಿ ರೂಪಾಲಿ ಸಂತೋಷ್ ನಾಯ್ಕ್ ಭಾರತಮಾತೆಗೆ ಪುಷ್ಪ ನಮನ ಸಲ್ಲಿಸಿ ಸದಸ್ಯತ್ವ ಅಭಿಯಾನ 2024 ಕಾರ್ಯಗಾರ ನಡೆಸಿದರು.

ಸಭೆಯನ್ನು ಉದ್ದೇಶಿಸಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ್ ಮಾತನಾಡಿ, ಪಕ್ಷ ನಮ್ಮ ತಾಯಿ ಸಮಾನ.ಪಕ್ಷಕ್ಕಾಗಿ ವ್ಯಕ್ತಿ ರಾಜಕೀಯ ಮಾಡಬಾರದು. ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರ ಮುಂದಾಳತ್ವದಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆಯುವುದು ಖಂಡಿತ ಎಂದರು. ಜಿಲ್ಲೆಯ ಸದಸ್ಯತ್ವ ಉಸ್ತುವಾರಿಯನ್ನು ನನಗೆ ವಹಿಸಿರುವುದರಿಂದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಸಂಖ್ಯೆಯನ್ನು ಹೆಚ್ಚಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸದಸ್ಯತ್ವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಸದಸ್ಯತ್ವ ಅಭಿಯಾನ ಹಿಂದಿನಿಂದಲೂ ಇದೆ. ಆದರೆ ಇದನ್ನು ಡಿಜಿಟಲ್‌ ಮಾಡಿರುವುದು ನಮ್ಮ ಬಿಜೆಪಿಯ ಹೆಮ್ಮೆಯ ನಾಯಕ ನರೇಂದ್ರ ಮೋದಿಜೀ ಅವರು. ಮಿಸ್‌ ಕಾಲ್‌ ನೀಡಿದವರಿಗೆ ನೋಂದಣಿ ಸಂಖ್ಯೆ ಮಾಡಿಕೊಂಡವರಿಗೆ ಗುರುತಿನ ಚೀಟಿ ಮಾದರಿಯಲ್ಲಿ ರಸೀದಿ ಸಿಗಲಿದೆ.

ಭಾರತೀಯ ಜನತಾ ಪಾರ್ಟಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ವ್ಯಕ್ತಿಗತವಾದ ಪಕ್ಷ ಅಲ್ಲ. ದೇಶಪ್ರೇಮ, ಪಕ್ಷ ಪ್ರೇಮ ಹೊಂದಿರಬೇಕು. ಪಕ್ಷ ನಮಗೆ ತಾಯಿಯಂತೆ. ಅದರ ಗೌರವಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸೋಣ ಪಕ್ಷ ಸಂಘಟನೆಯನ್ನು ಮಾಡೋಣ.

300x250 AD

ಸದಸ್ಯತ್ವ ಅಭಿಯಾನವು ಸೆ. 2 ರಂದು ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಚಾಲನೆಗೊಳ್ಳಲಿದೆ. ಅಭಿಯಾನದಲ್ಲಿ ನೋಂದಣಿ ಮಾಡಿಕೊಳ್ಳುವುದು ಮೂರು ಹಂತದಲ್ಲಿ ಇರಲಿದೆ. ಮೊದಲಿಗೆTel:+918800002024 ಸಂಖ್ಯೆಗೆ ಮಿಸ್ಡ್‌ ಕಾಲ್ ಮಾಡುವುದು. ಎರಡನೇ ಹಂತದಲ್ಲಿ ಮಿಸ್ಡ್‌ಕಾಲ್‌ ಮಾಡಿದ ಸಂಖ್ಯೆಗೆ ಬರುವ ಎಸ್‌ಎಂಎಸ್‌ ನ ಲಿಂಕ್‌ನ್ನು ಒತ್ತಿ ಸಂಪೂರ್ಣ ವಿವರವನ್ನು ಹಾಕುವುದು. ಮೂರನೇ ಹಂತದಲ್ಲಿ ಸದಸ್ಯತ್ವದ ಕಾರ್ಡನ್ನು ಪಡೆಯುವುದು ಆಗಿರುತ್ತದೆ. ಸದಸ್ಯತ್ವದ ಅಭಿಯಾನದಲ್ಲಿ ನೀಡಿದ ಗುರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು. ಪ್ರತಿ ವಾರ್ಡ್‌, ಬೂತ್‌ ಮಟ್ಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ನಂತರ ನಗರ ಮಂಡಲ ಪ್ರಭಾರಿ ಗಳಾದ ರಾಜೇಶ್ ಭಂಡಾರಿ ಮಾತನಾಡಿ ಅನ್ಯ ಪಕ್ಷಕ್ಕೆ ಹೋಲಿಕೆ ಮಾಡಿದರೆ ನಮ್ಮ ಪಕ್ಷ ಕಾರ್ಯಕರ್ತರಿಗೆ ವಿಶೇಷ ಗೌರವ ನೀಡಿದೆ. ಹಾಗೆ ಸದಸ್ಯತ್ವ ಹೇಗೆ ಮಾಡಬೇಕು ಎನ್ನವುದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಗ್ರಾಮೀಣ ಮಂಡಲ ಅಧ್ಯಕ್ಷರು ಸುಭಾಷ್ ಗುನಗಿ ಮಾತನಾಡಿ ತಾವೆಲ್ಲರೂ ಸದಸ್ಯತ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು. ನಗರ ಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ಸದಸ್ಯತ್ವ ಅಭಿಯಾನಕ್ಕೆ ಶುಭ ಹಾರೈಸಿದರು. ಉಪಾಧ್ಯಕ್ಷೆ ಪ್ರೀತಿ ಜೋಶಿ ಶುಭ ಹಾರೈಸಿದರು. ವೇದಿಕೆ ಮೇಲೆ ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ನಾಗೇಶ್ ಕುರುಡೇಕರ್, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬ್ಳೆ, ಸ್ಥಾಯಿ ಸಮಿತಿ ಅಧ್ಯಕ್ಷರು ಮನೋಜ್ ಬಾಡ್ಕರ್, ವಿ.ಎಮ್. ಹೆಗಡೆ, ಪ್ರಾಸ್ತವಿಕ ಮಾತು ನಗರ ಮಂಡಲ ಅಧ್ಯಕ್ಷರು ನಾಗೇಶ್ ಕುರಡೇಕರ್ ಮಾತನಾಡಿದರು. ಸ್ವಾಗತವನ್ನು ನಗರ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಮಾಡಿದರು. ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳು, ನಗರ ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರು, ಸದಸ್ಯರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಕಾರ್ಯದರ್ಶಿಗಳು, ಶಕ್ತಿ ಕೇಂದ್ರ ಪ್ರಮುಖರು, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಬೂತ್ ಅಧ್ಯಕ್ಷರು, ನಗರ ಸಭಾ ಸದಸ್ಯರು, ಎಲ್ಲಾ ಮೋರ್ಚಾ ದವರು ಕಾರ್ಯಕರ್ತರು ಉಪಸ್ಥಿತರಿದ್ದರು.

ನೂತನ ನಗರ ಸಭಾ ಅಧ್ಯಕ್ಷರು, ಹಾಗೂ ಉಪಾಧ್ಯಕ್ಷರು ಗಳಿಗೆ, ನಗರ ಸಭಾ ಸದಸ್ಯರು ಮಹಿಳಾ ಮೋರ್ಚಾ, ಹಾಗೂ ಎಸ್ ಟಿ, ಎಸ್ ಸಿ ಮೋರ್ಚಾ ದವರಿಂದ ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top