Slide
Slide
Slide
previous arrow
next arrow

ಅಜಿತ ಮನೋಚೇತನಾದಿಂದ ವಿನೂತನ ಹೆಜ್ಜೆ: ಸ್ಫೀಚ್ ಥೆರಪಿ ತರಬೇತಿ ಶಿಬಿರ

300x250 AD

ಶಿರಸಿ: ಇತ್ತೀಚೆಗೆ ಶಿರಸಿಯ ಅಜಿತ ಮನೋಚೇತನಾ ಸಂಸ್ಥೆಯಿಂದ ಸ್ಫೀಚ್ ಥೆರಪಿ ಕುರಿತ ತರಬೇತಿ ಶಿಬಿರ‌ ನಡೆಯಿತು. ಬುದ್ಧಿಮಾಂದ್ಯತೆ, ವಿಕಲಚೇತನರು, ಮಾತು ಬಾರದೇ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಮಾತಾಡುವಂತೆ ತರಬೇತಿ, ಚಿಕಿತ್ಸೆ, ಥೆರಪಿ ನಡೆಸುವ ಅವಶ್ಯಕತೆ ಮನಗಂಡು ಅಜಿತ ಮನೋಚೇತನಾ ಧಾರವಾಡದಿಂದ ತಜ್ಞರನ್ನು ಆಹ್ವಾನಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಸುಧಿರ ಭಟ್ ಎಲ್ಲರನ್ನು ಸ್ವಾಗತಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಫೀಚ್ ಥೆರಪಿ ತಜ್ಞ ಡಾ| ದರ್ಶನ್ ಬಾಲ್ಯದಲ್ಲೇ ಸ್ಫೀಚ್ ಥೆರಪಿ ನೀಡಿದರೆ ಅದರ ಪ್ರಯೋಜನ ಬಹಳ ಇದೆ. ಎಂದರು. ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆ ಧಾರವಾಡದಲ್ಲಿ ಈ ವಿಷಯದಲ್ಲಿ ಡಿಪ್ಲೋಮಾ ಪದವಿ ನೀಡುತ್ತಿದೆ. ಇಲ್ಲಿ ತರಬೇತಿ ಲಭ್ಯವಿದೆ. ಎಂದು ಮಾಹಿತಿ ನೀಡಿದರು. ಟ್ರಸ್ಟಿ ಗೋಪಾಲ್ ಹೆಗಡೆ ಇಟಗುಳಿ ತಜ್ಞರ ತಂಡದ ಶ್ರೀಹರ್ಷ ಇನ್ನಿತರು ವೇದಿಕೆಯಲ್ಲಿ ಇದ್ದರು.

ನಂತರ ನಡೆದ ಮಕ್ಕಳ ಪರೀಕ್ಷೆ, ಪ್ರಾತ್ಯಕ್ಷಿಕೆ, ಆಪ್ತ ಸಲಹೆ ಗೋಷ್ಠಿಗಳಲ್ಲಿ ಅಜಿತ ಮನೋಚೇತನಾ ಶಿಕ್ಷಕಿಯರಾದ ಸುಮಿತ್ರಾ, ಗೀತಾ, ಪರಿಮಳಾ ಅವರು “8 ವರ್ಷ ಹಿಂದೇ ಧರಿತ್ರಿ (ಬೆಂಗಳೂರು) ಸಂಸ್ಥೆಯ ಶಿಕ್ಷಕರಿಂದ ಸ್ಫೀಚ್ ಥೆರಪಿಯ ಆರಂಭಿಕ ತರಬೇತಿ ಪಡೆದೆವು. ನಮ್ಮ ವಿಕಾಸ ಶಾಲೆಯ 10 ಮಕ್ಕಳಿಗೆ ಪ್ರತಿದಿನ ನೀಡುವ ಮಾತು ಕಲಿಕೆ ಪ್ರಾತ್ಯಕ್ಷಿಕೆ ಪ್ರಯೋಜನ ನೀಡಿದೆ. ಮಾತೇ ಬಾರದ 5 ಮಕ್ಕಳು ಸಮ್ಮೇದ, ವರ್ಷಾ, ಸಂಜಯ್, ಗಿರೀಶ, ಶ್ರವಣ ಸ್ವಲ್ಪ ಸ್ವಲ್ಪ ಮಾತನಾಡುತ್ತಾರೆ. ಒಂದು ಮಗು ಹಾಡು ಹಾಡುತ್ತಾಳೆ” ಎಂದು ತಮ್ಮ ಅನುಭವ ತೆರೆದಿಟ್ಟರು. ಪಾಲಕಿಯರಾದ ಪ್ರೇಮಾ, ಚಂದ್ರಕಲಾ, ಶರಾವತಿ ಇವರು ಇದಕ್ಕಾಗಿ ವಿಕಾಸ ಶಾಲೆಗೆ ಧನ್ಯವಾದ ಹೇಳಿದರು.

300x250 AD

ಪಾಲಕಿ ಶ್ರೀಮತಿ ಗುಲ್‌ಶನ್ ತನ್ನ ಮಗುವಿಗೆ “ಮಾತು ಕಲಿಸಲೇಬೆಕೆಂಬ ಗಟ್ಟಿ ನಿರ್ಧಾರ ಮಾಡಿದ್ದೇನೆ” ಎಂದು ತಿಳಿಸಿದರು. ತಜ್ಞರ ಸಲಹೆ ಪಾಲಿಸುವದಾಗಿ ತಿಳಿಸಿದರು. 24 ವಿಶೇಷ ಮಕ್ಕಳ ಪರೀಕ್ಷೆ ನಡೆಯಿತು. ಸಮಾರೋಪದಲ್ಲಿ ಪಾಲ್ಗೊಂಡ ರೋಟರಿ ಆಸ್ಪತ್ರೆ ವಾಕ್ – ಶ್ರವಣ ತಜ್ಞ ಡಾ|| ಅನಿಲ್ ಅವರು ಶಿರಸಿಯಲ್ಲಿ ಸ್ಫೀಚ್ ಥೆರಪಿ ನೀಡಲು ಮುಂದಾದ ಅಜಿತ ಮನೋಚೇತನಾ ಪ್ರಯತ್ನ ಶ್ಲಾಘನೀಯ. ಚಿಕಿತ್ಸೆ ಅವಶ್ಯ ಇರುವ 5 ಮಕ್ಕಳಿಗೆ ರೋಟರಿ ಆಸ್ಪತ್ರೆಯಿಂದ ಚಿಕಿತ್ಸೆ ನೀಡುತ್ತೇವೆ. ಎಂದರು.
ಯೋಗ ಶಿಕ್ಷಕಿ ಶ್ಯಾಮಲಾ ಅವರು “ಓಂಕಾರ, ಘೋಷಣೆಗಳು, ಶ್ಲೋಕ ಇವೆಲ್ಲ ಪಠಣದಿಂದ ಮಗುವಿನ ಮಾತು ಹೊರಬರಲು, ಸ್ಫುಟವಾಗಲು ಸಹಾಯಕವಾಗಿದೆ”. ಎಂದರು.
ಟ್ರಸ್ಟಿ ಡಾ| ಕೇಶವ ಹೆಚ್. ಕೊರ್ಸೆ ಅವರು ಧಾರವಾಡದ ತಜ್ಞ ತಂಡಕ್ಕೆ ಧನ್ಯವಾದ ಹೇಳಿದರು. “ಇಲ್ಲಿ ಪಾಲಕರು, ಶಿಕ್ಷಕರು, ತಜ್ಞರು, ಆಡಳಿತ ಮಂಡಳಿ ಒಟ್ಟಿಗೆ ಸೇರಿ ಪರಿಶ್ರಮ ಹಾಕಲು ಮುಂದಾಗಿದ್ದೇವೆ. ಇತ್ತೀಚೆಗೆ ಆಯುಷ್ ಅಧಿಕಾರಿ ಡಾ| ಜಗದೀಶ್ ಯಾಜಿ ಅವರೂ ಈ ವಿಷಯದಲ್ಲಿ ನೆರವು ನೀಡಲು ಮುಂದೆ ಬಂದಿದ್ದಾರೆ.” ಎಂದು ಮೆಚ್ಚುಗೆ ವ್ಯಕ್ತ ಮಾಡಿದರು. ಮುಖ್ಯ ಶಿಕ್ಷಕಿ ರ‍್ಮದಾ ಅವರು ಧನ್ಯವಾದ ನೀಡಿದರು. ವಿಕಲಚೇತನರಿಗೆ ನೀಡುವ ಆರೋಗ್ಯ ಸೇವೆ ಮೂಲಕ ಸಿಕ್ಕ ಧನ್ಯತಾಭಾವ ವ್ಯಕ್ತ ಮಾಡಿದರು.

Share This
300x250 AD
300x250 AD
300x250 AD
Back to top