Slide
Slide
Slide
previous arrow
next arrow

ಸಂಸ್ಕೃತವು ಸಂಸ್ಕೃತಿಯ ಜನನಿ: ಗಣಪತಿ ಭಟ್ಟ

300x250 AD

ಶಿರಸಿ: ಸಂಸ್ಕೃತವು ಮಾನವನ ಮೂಲಭಾಷೆಯಾಗಿದ್ದು, ಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾತೃಸ್ಥಾನದಲ್ಲಿದೆ ಎಂದು ಎಂದು ಗಣಪತಿ ಭಟ್ಟ ಮೋದೂರು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತ ಪಾಠಶಾಲಾ ಸಾಲ್ಕಣಿ ಹಾಗೂ ಶ್ರೀ ಲಕ್ಷ್ಮಿನೃಸಿಂಹ ಮಾಧ್ಯಮಿಕ ಶಾಲಾ ಇವುಗಳ ಸಹಯೋಗದಲ್ಲಿ ನಡೆದ ಅಸ್ಮಾಕಂ ಸಂಸ್ಕೃತ ಸರಣಿ ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂತಹ ಸಂಸ್ಕೃತ ಭಾಷೆಯು ಎಲ್ಲಾ ರೀತಿಯ ದಾಳಿಗಳಿಗೆ ಒಳಗಾದರೂ ಇಂದೂ ಜನಮಾನಸದಲ್ಲಿ ಹಚ್ಚಹಸಿರಾಗಿದೆ ಎಂದು ಹೇಳಿದರು.

300x250 AD

ಪಾಠಾಶಾಲಾ ಮುಖ್ಯಾಧ್ಯಾಪಕರಾದ ವಿ. ನಾರಾಯಣ ವಿ. ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧ್ಯಮಿಕ ಶಾಲಾ ಮುಖ್ಯಾಧ್ಯಾಪಕರಾದ ಪ್ರಶಾಂತ ಜಿ. ಭಟ್ಟ ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ಪ್ರೇಮವನ್ನು ವ್ಯಕ್ತಪಡಿಸಿದರು. ಸಂಸ್ಕೃತಾಧ್ಯಾಪಕ ವಿ|| ದೇವೇಂದ್ರ ಎಲ್. ಭಟ್ಟ ಮಾತನಾಡಿ, ಬಾಲ್ಯದಲ್ಲಿಯೇ ಸಂಸ್ಕೃತ ಭಾಷೆಯ ಸಂಸ್ಕಾರ ಅವಶ್ಯ ಎಂದರು. ಸಹ ಪ್ರಾಧ್ಯಾಪಕ ವಿ| ದಿವಾಕರ ವಾ. ಭಟ್ಟ ನಿರೂಪಿಸಿ ವಂದನಾರ್ಪಣೆ ಗೈದರು. ಈ ಸಂದರ್ಭದಲ್ಲಿ ಪಾಠಶಾಲಾ ವಿದ್ಯಾರ್ಥಿಗಳು, ಅಧ್ಯಾಪಕರು, ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಇದ್ದರು. ಈ ಸಂದರ್ಭದಲ್ಲಿ ಸಭಾಸದರಿಗೆ ಸಸಿ ವಿತರಿಸಲಾಯಿತು.

Share This
300x250 AD
300x250 AD
300x250 AD
Back to top