ಶಿರಸಿ: ದಿನೋಪಯೋಗಿ ಗುಣಮಟ್ಟದ ಬಟ್ಟೆಗಳ ಮಾರಾಟ ಮಾಡುವ ನೂತನ ಬಟ್ಟೆ ಅಂಗಡಿ ‘ಧನ್ವಿ ವಸ್ತ್ರಂ’ ಇತ್ತಿಚಿಗೆ ತಾಲೂಕಿನ ಬಂಡಲದಲ್ಲಿ ಶುಭಾರಂಭಗೊಂಡಿತು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತು ಗುಣಮಟ್ಟದ ಬಟ್ಟೆಗೆ ಆದ್ಯತೆ ನೀಡುವ ಮೂಲಕ ಸ್ಥಳೀಯರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ನೂತನ ಬಟ್ಟೆ ಅಂಗಡಿ ತೆರೆಯಲಾಗಿದೆ. ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಡಲದಲ್ಲಿ ಬಟ್ಟೆ ಅಂಗಡಿ ಲೋಕಾರ್ಪಣೆಗೊಂಡಿದ್ದು, ಈ ವೇಳೆ ವಂದನಾ ಕಿರಣ ಹುತ್ಗಾರ್ (ಹಳ್ಳಿಬೈಲ್), ಮನು ವೈದ್ಯ ಸೇರಿದಂತೆ ಕುಟುಂಬದ ಹಿರಿಯರು, ಹಿತೈಷಿಗಳು ಭಾಗಿಯಾಗಿದ್ದರು.