ವೈದ್ಯ ಹೆಗ್ಗಾರಿನಲ್ಲಿ ಅಗಸೂರು ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಅಂಕೋಲಾ: ಅಗಸೂರ ವಲಯ ಮಟ್ಟದ ಕ್ರೀಡಾಕೂಟ ಡೊಂಗ್ರಿ ಕ್ಲಸ್ಟರ್‌ನ ವೈದ್ಯ ಹೆಗ್ಗಾರ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ರಾಮನಗುಳಿ ವಲಯ ಅರಣ್ಯ ಅಧಿಕಾರಿ ಸುರೇಶ ನಾಯ್ಕ ನೆರವೇರಿಸಿ ವಿದ್ಯಾರ್ಥಿಗಳು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲೇಶ್ವರ ಶಾಲೆಯ ಅಧ್ಯಕ್ಷ ವಿ.ಎಸ್.ಭಟ್ಟ ಕಲ್ಲೇಶ್ವರ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಆಟದ ಕಡೆ ಹೆಚ್ಚು ಗಮನ ನೀಡಿದರೆ ಏಕಾಗ್ರತೆ ಜೊತೆಗೆ ದೈಹಿಕ, ಮಾನಸಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿಯಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ ಇಷ್ಟು ದೊಡ್ಡ ಜನಸಂಖ್ಯೆಯ ದೇಶದಲ್ಲಿ ಒಲಿಂಪಿಕ್‌ಗಳಲ್ಲಿ ಚಿನ್ನದ ಪದಕ ಗೆಲ್ಲುವ ಪ್ರತಿಭೆಗಳು ಇಲ್ಲ ಇನ್ನು ಮುಂದೆ ಶೈಕ್ಷಣಿಕ ಚಟುವಿಕೆಗಳ ಜೊತೆಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಮೂಲಕ ಓಲಂಪಿಕ್ ನಲ್ಲಿಯೂ ನಮ್ಮ ಮಕ್ಕಳು ಚಿನ್ನ ಗೆಲ್ಲುವಂತಾಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಮೆಹಬೂಬ್ ಸಾಬ್ ಅಂಕಲಿ, ಶಿವಾನಂದ ಮಾಳಿ, ಬಸವರಾಜ ಜಂಬಗಿ, ಪಂಚಾಯತ ಸದಸ್ಯರುಗಳಾದ ಮೋಹನ ಪಟಗಾರ, ಮಂಜುಳಾ ಪೆಡ್ನೆಕರ, ಸುಧಾಕರ ಭಟ್ಟ, ನಾರಾಯಣ ಗಾಂವ್ಕರ, ಸಿಆರ್‌ಪಿ ಗಳು, ಶಿಕ್ಷಕರು, ಪಾಲಕರು, ಊರ ನಾಗರಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ವರ್ಗಾವಣೆಗೊಂಡ ಕಲ್ಲೇಶ್ವರ ಪ್ರೌಢಶಾಲೆ ದೈಹಿಕ ಶಿಕ್ಷಕರಾದ ವಿಶಾಲ ನಾಯಕರಿಗೆ ಸನ್ಮಾನಿಸ ಲಾಯಿತು. ಸಿಆರ್‌ಪಿ ಆರ್.ಜಿ. ನಾಯ್ಕ ಸ್ವಾಗತಿಸಿದರು, ಶಿಕ್ಷಕರಾದ ರಮೇಶ ಹೆಗಡೆ ಎಲ್ಲರನ್ನೂ ಅಭಿನಂದಿಸಿದರು. ಶಿಕ್ಷಕರಾದ ಗಣೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.