ಯಲ್ಲಾಪುರ: ಮಹಿಳೆಯರಲ್ಲಿ ಉಳಿತಾಯ ಯೋಜನೆಯ ಕುರಿತು ಜಾಗೃತಿ ಉಂಟಾಗುವಂತೆ ಆರ್ಥಿಕವಾಗಿ ಸಬಲರಾಗುವಲ್ಲಿ ಮಹಿಳಾ ಸಹಕಾರಿ ಸಂಘದ ಕೊಡುಗೆ ಇದೆ.ಅದರಂತೆ ರಾಷ್ಟ್ರೀಕೃತ ಬ್ಯಾಂಕುಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗದ ಸಂದರ್ಭದಲ್ಲಿ ,ಅನೇಕ ಅಡೆತಡೆಗಳ ನಡುವೆ ನಿರಂತರ ಸಫಲತೆ ಸಾಧಿಸುವ ನಿಟ್ಟಿನಲ್ಲಿ ದಶಮಾನೋತ್ಸವದತ್ತ ಹೆಜ್ಜೆ ಇಟ್ಟಿದೆ.ಎಂದು ಪಟ್ಟಣ ಪಂಚಾಯತ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ಅಂಬೇಡ್ಕರ ಸಭಾಭವನದಲ್ಲಿ ಪ್ರಿಯದರ್ಶಿನಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದ ಸರ್ವಸಾಧಾರಣಾ ಸಭೆ ಹಾಗೂ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆವಹಿಸಿ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮಾತನಾಡಿ
ಅರ್ಥಶಾಸ್ತ್ರ ವ್ಯಾಖ್ಯಾನದಲ್ಲಿ ಮಹಿಳೆ ಮತ್ತು ಉತ್ಪಾದನೆ ಎಂಬ ವಿಷಯಗಳು ಪ್ರಸ್ತಾಪವಾಗದೇ ಇದ್ದ ಕಾಲವೊಂದಿತ್ತು. ಕೃಷಿ ಪ್ರಧಾನವಾದ ನಮ್ಮ ರಾಷ್ಟ್ರದಲ್ಲಿ ವ್ಯಾವಹಾರಿಕವಾದ ಪ್ರತಿಯೊಂದು ಜವಾಬ್ದಾರಿಯನ್ನು ಪುರುಷರೇ ನಿರ್ವಹಿಸಿ, ಕೇವಲ ಕೂಲಿ, ಮಕ್ಕಳ ಪಾಲನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಕ್ರಮನಿಷ್ಠೆ, ಸಮಯ ಪಾಲನೆ ಮತ್ತು ಆಸಕ್ತಿಯಿಂದ ಭಾಗವಹಿಸುತ್ತ ಮುಂದುವರೆಯುತ್ತಿದ್ದಾಳೆ.ಅದರಂತೆ ಆರ್ಥಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡ ಪ್ರಿಯದರ್ಶೀನಿ ಸಹಕಾರ ಸಂಘ ದಶಮಾನೋತ್ಸವದ ಸಂಭ್ರಮದಲ್ಲಿರುವುದೇ ಇದಕ್ಕೆ ಸಾಕ್ಷಿಯಾಗಿದೆ.ಎಂದರು. ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಮಹಿಳೆಯರು ಶ್ರದ್ದೆಯಿಂದ ಕಾರ್ಯನಿರ್ವಹಿಸುತ್ತಾರೆ ಎಂಬ ಹೆಗ್ಗಳಿಕೆ ಇದೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಅವಕಾಶಗಳ ಕೊರತೆಯಿಂದಾಗಿ ಸಾಧನೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಅವಕಾಶಅಧಿಕವಾಗಿ ಇಂತಹ ಮಹಿಳಾ ಸಹಕಾರಿ ಸಂಘವು ಅರ್ಹರಿಗೆ ಅಗತ್ಯವಿರುವ ಸಾಲ-ಸೌಲಭ್ಯ ಗಳನ್ನು ಒದಗಿಸುತ್ತಿದ್ದು,ಆ ಮೂಲಕ ಮಹಿಳೆಯರು ಕ್ರಮಬಧ್ದವಾಗಿ ಸಾಲ ಮರುಪಾವತಿನ್ನು ಮಾಡುವುದರಿಂದ ಪ್ರಗತಿಯತ್ತ ಮುನ್ನಡೆಯಲು ಸಾಧ್ಯವಾಗಿದೆ ಎಂದರು.
ವೇದಿಕೆಯಲ್ಲಿ ಪಪಂ ಸದಸ್ಯರಾದ ಗೀತಾ ದೇಶಭಂಡಾರಿ, ಜ್ಯೋತಿ ನಾಯ್ಡು, ಸಾಮಾಜಿಕ ಕಾರ್ಯಕರ್ತೆತನುಜಾ ಬದ್ದಿ,ಪತ್ರಕರ್ತೆ ಪ್ರಭಾವತಿ ಗೋವಿ,ಕೆಡಿಡಿಸಿ ಸಂಸ್ಥೆ ಸಂಯೋಜಕ ಹರಿಶ್ಚಂದ್ರ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ,ಸಾಧಕ ಮಹಿಳೆಯರಿಗೆ, ವಿಕಲಚೇತನರಿಗೆ, ಪಿಗ್ಮಿದಾರರಿಗೆ,ಸದಸ್ಯರಿಗೆ ಸನ್ಮಾನಿಸಿ ಗೌರವಿಸಿದರು.ಅಧ್ಯಕ್ಷೆ ವನಿತಾ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. .ವ್ಯವಸ್ಥಾಪಕಿ ಮಿಲನ್ ಸ್ವಾಗತಿಸಿದರು,ಸಿಬ್ಬಂದಿ ಫತೇಜಾ ನಿರ್ವಹಿಸಿದರು.