ಕಾರವಾರ : ಸೀಬರ್ಡ್ ನೌಕಾನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಸೋರಿಕೆ ಮಾಡಲಾಗಿದೆ ಎನ್ನುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು, ಮೂವರನ್ನು ತೀವ್ರ ವಿಚಾರಣೆ ನಡೆಸಿದೆ. ಕಾರವಾರ ಸೇರಿ ಮೂರು ಕಡೆಯಲ್ಲಿ ದಾಳಿ ನಡೆಸಲಾಗಿದ್ದು, ಕಾರವಾರ ತಾಲೂಕಿನ ಮುದಗಾ ನಿರಾಶ್ರಿತರ ಕಾಲೋನಿ, ತೋಡೂರು ಹಾಗೂ ಗೋಕರ್ಣದ ಹನೆಹಳ್ಳಿಯಲ್ಲಿ ಎನ್ಐಎ(NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸೀಬರ್ಡ್ ನೌಕಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ಅಲ್ಲಿನ ಮಹತ್ವ ಮಾಹಿತಿಯನ್ನ ಸೋರಿಕೆ ಮಾಡಿದ್ದರು ಎನ್ನಲಾಗಿದ್ದು, ವಶಕ್ಕೆ ಪಡೆಯಲಾಗಿರುವ ಮೂವರ ಬ್ಯಾಂಕ್ ದಾಖಲೆ ಹಾಗೂ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ. ದಾಳಿಯ ಕುರಿತಾಗಿ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.