Slide
Slide
Slide
previous arrow
next arrow

ಸೋಲಾರ್ ಬ್ಯಾಟರಿ ಕಳ್ಳತನ: ದೂರು ದಾಖಲು

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಎದುರು ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ ಲೈಟಿನ ಬ್ಯಾಟರಿಯನ್ನು ಕಳ್ಳರು ಕದ್ದುಕೊಂಡು ಹೋದ ಘಟನೆ ನಡೆದಿದೆ.

ವಾಜಗದ್ದೆಯಲ್ಲಿ ಅಳವಡಿಸಿದ್ದ ಹಾಗೂ ಮುಠ್ಠಳ್ಳಿಯಲ್ಲಿ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು ಬಿಳಿ ಸ್ಕೂಟಿ ದ್ವಿಚಕ್ರವಾಹನದಲ್ಲಿ ಇಬ್ಬರು ಹೆಲ್ಮೇಟ್ ಧರಿಸಿಕೊಂಡು ಬಂದು ಲಪಟಾಯಿಸಿಕೊಂಡು ಹೋಗಿದ್ದು ಸ್ಪಷ್ಟವಾಗಿ ಕಂಡುಬರುತ್ತಿದ್ದು ಆದರೆ ಇವರು ಯಾರೂ ಎನ್ನುವುದು ತಿಳಿಯುತ್ತಿಲ್ಲ. ಈ ಕುರಿತು ಈಗಾಗಲೇ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದವರು ಹಾಗೂ ಮುಠ್ಠಳ್ಳಿಯ ಸಾರ್ವಜನಿಕರು ಗ್ರಾಪಂಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸಿದ್ದಾಪುರ ಪೊಲೀಸರು ವಾಜಗದ್ದೆ ಹಾಗೂ ಮುಠ್ಠಳ್ಳಿಗೆ ಬಂದು ಸ್ಥಳಪರಿಶೀಲಿಸಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲಿಸಿದ್ದಾರೆ.

300x250 AD

ವಾಜಗದ್ದೆಯಲ್ಲಿ ಹಾಗೂ ಮುಠ್ಠಳ್ಳಿಯಲ್ಲಿ ಸೋಲಾರ್ ಬ್ಯಾಟರಿ ಕಳ್ಳತನವಾಗಿರುವ ಕುರಿತು ಗ್ರಾಪಂನಿಂದ ಬುಧವಾರ ಪೊಲೀಸ್ ದೂರು ನೀಡಲಾಗುವುದು ಎಂದು ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ ಹಾಗೂ ಪಿಡಿಒ ರಾಜೇಶ ನಾಯ್ಕ ತಿಳಿಸಿದ್ದಾರೆ. ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಅಶೋಕ ಪ್ರೌಢಶಾಲೆ ಹತ್ತಿರ ಎರಡು ಕಡೆ, ಹೊನ್ನೆಹದ್ದ ಹಾಗೂ ಮಾನಿಹೊಳೆ ಬಸ್ ನಿಲ್ದಾಣದ ಸಮೀಪ ಅಳವಡಿಸಿದ್ದ ಸೋಲಾರ್ ಲೈಟಿನ ಬ್ಯಾಟರಿಯನ್ನು ಈ ಹಿಂದೆ ಯಾರೋ ಕಳ್ಳತನಮಾಡಿಕೊಂಡು ಹೋಗಿದ್ದು ಈ ಕುರಿತು ಗ್ರಾಪಂನವರು ಪೊಲೀಸರಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲ. ಪೊಲೀಸರು ರಾತ್ರಿ ಗಸ್ತು ಕಾಯಾಚರಣೆ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ನಡೆಯುವ ಕಳ್ಳತನವನ್ನು ತಡೆಯಬೇಕೆಂದು ವಾಜಗದ್ದೆ, ಮುಠ್ಠಳ್ಳಿ, ಹಾರ್ಸಿಕಟ್ಟಾ ಸುತ್ತಮುತ್ತಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top