Slide
Slide
Slide
previous arrow
next arrow

ತಡೆಗೋಡೆ ಸಂಪೂರ್ಣ ನಾಶ: ಶಾಶ್ವತ ಪರಿಹಾರಕ್ಕಾಗಿ ಸಚಿವ ವೈದ್ಯರಿಗೆ ಮನವಿ ಸಲ್ಲಿಕೆ

300x250 AD

ಹೊನ್ನಾವರ: ತಾಲೂಕಿನ ಕರ್ಕಿ ತೊಪ್ಪಲಕೇರಿ, ಹೆಗಡೆಹಿತ್ಲ ದಂಡೆಗೆ ಹಾಕಿರುವ ತಡೆಗೋಡೆ ಸಂಪೂರ್ಣ ನಾಶಗೊಂಡಿದ್ದು, ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ದೊರಕಿಸಿ ಕೊಡುವ ಬಗ್ಗೆ ಅಲ್ಲಿನ ಗ್ರಾಮಸ್ಥರು ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರಿಗೆ ಸಲ್ಲಿಸಿದರು.

ಪೂರ್ವಿಕರ ಕಾಲದಿಂದಲೂ ಇಲ್ಲಿ ವಾಸಿಸುತ್ತಾ ಬಂದಿದ್ದೇವೆ. ಈ ಭಾಗದಲ್ಲಿ ಹಲವಾರು ಮನೆ, ಭೂಮಿ, ಜನವಸತಿ ಇರುತ್ತಿದ್ದು, ಕಳೆದ 2017ನೇ ಜೂನ್ ತಿಂಗಳಲ್ಲಿ ಸಮುದ್ರದ ಅಲೆಗಳ ಅಬ್ಬರಕ್ಕೆ ಕಡಲ್ಕೊರೆತ ಉಂಟಾಗಿ ಹಿಂದೆ ನಿರ್ಮಿಸಿದ ತಡೆಗೋಡೆಗಳು ಸಂಪೂರ್ಣ ನೆಲಸಮವಾಗಿದೆ. ಸಮುದ್ರ ಹಾಗೂ ನದಿಯ ನೀರು ಉಕ್ಕಿ ಹರಿಯುವುದರಿಂದ ಭೂಮಿ, ಮನೆ, ಬಾವಿಗಳು ಕುಸಿದಿರುತ್ತದೆ. ಬಾವಿಯ ನೀರು ಸದಾ ಹಾಳಾಗಿ ಕುಡಿಯಲು ಸಹಾ ಆಗದೇ ಇರುವ ಪರಿಸ್ಥಿತಿ ಇದೆ. ಅಲ್ಲಿಂದ ಈವರೆಗೆ ಕ್ಷೇತ್ರದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅಲ್ಲದೇ ಹೊನ್ನಾವರ ತಹಶೀಲ್ದಾರ ಕಛೇರಿಯಲ್ಲಿ ಕುಂದು ಕೊರತೆ ಸಭೆ ಕರೆದಾಗ ಊರವರು ಹಾಜರಿದ್ದು, ಈ ವಿಷಯದ ಬಗ್ಗೆ ವಿನಂತಿಸಿ ಮನವಿ ನೀಡಿದ್ದೇವೆ. ಕಳೆದ 2017 ರಿಂದ ಈವರೆಗೂ ಅಂದರೆ 7 ವರ್ಷಗಳಾದರೂ ಯಾವುದೇ ತುರ್ತು ಕ್ರಮ ಆಗಿಲ್ಲ. ಈ ಭಾಗದ ಜನರು ಹಗಲು-ರಾತ್ರಿ ಜೀವಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ. ತಡಗೋಡೆ ಈಗ ಸಂಪೂರ್ಣ ನೆಲಸಮವಾಗಿದೆ. ಸದ್ಯದಲ್ಲಿಯೇ ಮನೆ, ಭೂಮಿ ಕಳೆದುಕೊಂಡು ನಿರ್ಗತಿಕರಾಗಬೇಕಾದ ಪರಿಸ್ಥಿತಿ ಇದೆ.
ಯಾರೊಬ್ಬರು ಸಹ ನಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಸ್ಪಂದಿಸಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಜನರು ಮೀನುಗಾರಿಕೆ ಹಾಗೂ ಇತರ ಉಪ ಕಸುಬುಗಳನ್ನು ಮಾಡಿಕೊಂಡು ಜೀವನ ನಡೆಸಿಕೊಂಡು ಬಂದಿರುವುದರಿಂದ ಈ ಸ್ಥಳಗಳಲ್ಲಿ ಮಳೆಗಾಲದಲ್ಲಿ ಹಾಗೂ ಚಂಡ ಮಾರುತದಿಂದ ವಿಪರೀತವಾದ ಅಲೆಗಳ ರಭಸಕ್ಕೆ ತಡೆಗೋಡೆ ನಾಶಗೊಂಡು, ಜಮೀನುಗಳಿಗೆ ನೀರು ನುಗ್ಗಿ, ವಾಸ್ತವ್ಯದ ಮನೆ ಹಾಗೂ ಕುಡಿಯುವ ನೀರಿಗೆ ಬಹಳ ಸಮಸ್ಯೆ ಉಂಟಾಗಿದೆ.ಈ ಕಡಲ ಕೊರೆತವನ್ನು ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಕುರಿತು ಕರ್ಕಿ ಗ್ರಾಮ ಪಂಚಾಯತ ಸದಸ್ಯ ಹರಿಶ್ಚಂದ್ರ ನಾಯ್ಕ,ಸ್ಥಳೀಯರಾದ ಸಣ್ತಮ್ಮ ನಾಯ್ಕ ಮಾತನಾಡಿ, ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶರಾವತಿ-ಬಡಗಣಿ ನದಿಯ ಸಂಗಮ ಪ್ರದೇಶದಲ್ಲಿ ತಡೆಗೋಡೆ ಕುಸಿದು ಹಾನಿಯಾಗುವ ಕುರಿತು ಬಹಳ ದಿನಗಳಿಂದ ಬೇರೆ ಬೇರೆ ಸರಕಾರ ಬಂದಾಗ ಮನವಿಯನ್ನು ನೀಡುತ್ತಾ ಬಂದಿದ್ದೇವೆ.ಈ ಬಗ್ಗೆ ಅನೇಕ ಹೋರಾಟ ನಡೆಸಿದರು ಪ್ರಯೋಜನವಾಗಿಲ್ಲ.ಸಚಿವ ಮಂಕಾಳ ವೈದ್ಯರವರಿಗೆ ಹಿಂದಿನ ಜನಸ್ಪಂದನ ಸಭೆಗೆ ಮನವಿ ನೀಡಿದಾಗ ಇದರ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಬಾರಿ ಮತ್ತೆ ಜನಸ್ಪಂದನ ಸಭೆಗೆ ಆಗಮಿಸಿ ಪುನಃ ಮನವಿ ನೀಡಿದ್ದೇವು. ತುರ್ತು ಸಂದರ್ಭದ ಕಾಮಗಾರಿಗಾಗಿ 2 ಕೋಟಿ ಮಂಜೂರು ಮಾಡಲಾಗಿದೆ. ನಂತರದ ದಿನಗಳಲ್ಲಿ ಸುಮಾರು 9ಕೋಟಿ ಕೆಲಸವನ್ನು ಪ್ರಾರಂಭಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ಗ್ರಾಮಪಂಚಾಯತ ಸದಸ್ಯರಾದ ಕಮಲಾಕರ ಮುಕ್ರಿ, ಸ್ಥಳೀಯರಾದ ಸುಮತಿ ನಾಯ್ಕ ಸುನೀಲ ವರ್ಗೀಸ್, ಮೋಹನ ನಾಯ್ಕ, ಗಜಾನನ ನಾಯ್ಕ, ಶಂಕರ ನಾಯ್ಕ, ಮಾದೇವ ನಾಯ್ಕ, ನಾಗಪ್ಪ ನಾಯ್ಕ, ಇತರರು ಹಾಜರಿದ್ದರು

Share This
300x250 AD
300x250 AD
300x250 AD
Back to top