ಯಲ್ಲಾಪುರ: ಪಟ್ಟಣದ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಛದ್ಮವೇಷ ಸ್ಪರ್ಧಾ ಕಾರ್ಯಕ್ರಮ ಮಂಗಳವಾರ ನಡೆಯಿತು.
ಒಂದನೇ ಫಾದರ್ ಪೀಟರ್ ಕರ್ನೇರಿಯೋ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಫಾದರ್ ರೊಯ್ಯಸ್ಟನ್ ಗೊನ್ಸಾಲ್ವೀಸ್, ಶಿಕ್ಷಕ ವೃಂದ ಹಾಗೂ ಸ್ಪರ್ಧಿಗಳ ಪಾಲಕರು ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಅನಿತಾ ಹಾಗೂ ಕುಸುಮಾ ಭಾಗವಹಿಸಿದ್ದರು. ಶ್ವೇತಾ ವಂದಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಚಿಣ್ಣರ ಛದ್ಮವೇಷ ಸ್ಪರ್ಧೆ ಯಶಸ್ವಿ
