Slide
Slide
Slide
previous arrow
next arrow

ಅಬ್ದುಲ್ ಕಲಾಂ ವಸತಿ ಶಾಲೆಯ ಅವ್ಯವಸ್ಥೆ: ಅಧಿಕಾರಿಗಳ ನಿರ್ಲಕ್ಷ್ಯ

300x250 AD

ಪಾಲಕರಿಂದ ಆಕ್ರೋಶ : ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಸಭೆ

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯು ಮೇಲಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾದ ಅವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊನೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಮಧ್ಯಸ್ಥಿಕೆಯಲ್ಲಿ ಪಾಲಕರೊಂದಿಗೆ ಸಭೆ ನಡೆದ ಘಟನೆ ಭಾನುವಾರ ನಡೆದಿದೆ‌.

40 ಕ್ಕೂ ಹೆಚ್ಚು ಪೋಷಕರು ಶಾಲೆಗೆ ಆಗಮಿಸಿ ಶಾಲೆಯಲ್ಲಿನ ಅನಾನೂಕೂಲತೆಯ ಕುರಿತು ಶಿಕ್ಷಕರೊಂದಿಗೆ ವಾಗ್ವಾದ ನಡೆಸಿ ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಪ್ರಾಚಾರ್ಯರಾದ ವಿಶ್ವನಾಥ ಹುಲಸವಾರ್ ಆ.3 ರಂದು ಬೇರೆಡೆ ವರ್ಗಾವಣೆಗೊಂಡಿದ್ದಾರೆ. ಆದರೆ ವರ್ಗಾವಣೆಗೊಂಡು ತೆರಳುವ ಮುನ್ನ ಶಾಲೆಯ ಮೇಲ್ವಿಚಾರಕರಿಗೆ ಅಧಿಕಾರ ಹಸ್ತಾಂತರಿಸದೆ ಇರುವದರಿಂದ ಇರುವ ಶಿಕ್ಷಕರಲ್ಲಿ ಗೊಂದಲ ಏರ್ಪಟ್ಟಿದೆ. ಶಾಲೆಯ ವಾರ್ಡನ್ ಯಾವುದೇ ಆದೇಶವಿಲ್ಲದೆ ಜು.25 ರಿಂದ ರಜೆಯ ಮೇಲಿದ್ದಾರೆ. ಇವರು ಕೂಡ ರಜೆಗೆ ತೆರಳುವ ಮೊದಲು ತಮ್ಮ ಆಧಿಕಾರ ಹಸ್ತಾಂತರಿಸಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾಥಿಗಳ ಪೋಷಕರು ಶಾಲೆಗೆ ಆಗಮಿಸಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಂತೆ ಶಿಕ್ಷಕರನ್ನು ಒತ್ತಾಯಿಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ಶಿಕ್ಷಕರೊಂದಿಗೆ ಚರ್ಚೆ ನಡೆಸಿದರೂ ಪ್ರಯೋಜನವಾಗಲಿಲ್ಲ.

ಇಲ್ಲಿ ಗಣಿತ ಶಿಕ್ಷಕರ ಕೊರತೆಯು ಈ ಶಾಲೆಗೆ ಇದೆ. ದೈಹಿಕ ಶಿಕ್ಷಕರಿದ್ದರೂ ಕೂಡ ಮಕ್ಕಳು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನ್ನು ತಾವು ಕಂಡಿಲ್ಲವೆಂದು ದೂರಿರುವ ಪೋಷಕರೊಬ್ಬರು, ಇಲ್ಲಿ ಓದುತ್ತಿರುವ ಕೆಲವು ಮಕ್ಕಳು ಚರ್ಮದ ಕಾಯಿಲೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಹಾಗೆ ಮಕ್ಕಳಿಗೆ ನೀಡುತ್ತಿರುವ ಊಟ ತೂಕ ಮತ್ತು ಗುಣಮಟ್ಟದಲ್ಲಿ ಅತ್ಯಂತ ಕಳಪೆ ಮಟ್ಟದ್ದಾಗಿದೆ ಹಾಗೂ ಶಾಲೆಯ ಆಡಳಿತ ಮಂಡಳಿ ಪೋಷಕರ ಸಭೆಯನ್ನು ಕರೆಯುವದಿಲ್ಲ ಎಂದು ಆರೋಪಿಸಿದ್ದಾರೆ.

300x250 AD

ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಕಿ ಪೋಷಕರ ಕೆಲವು ಆರೋಪಗಳನ್ನು ತಳ್ಳಿಹಾಕುತ್ತ ಪ್ರಾಚಾರ್ಯರ ಮತ್ತು ವಾರ್ಡನ್ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ ಎಂದು ತಿಳಿಸಿದ್ದಾರೆ. ಹೀಗೆ ಮಾತು ಮುಂದುವರೆದರೂ ಕೂಡ ಯಾವುದೇ ಫಲಿತಾಂಶ ಸಿಗದೆ ಇದ್ದಾಗ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಶಾಲೆಗೆ ಆಗಮಿಸಿದರು.

ಪಾಲಕರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಸಮಸ್ಯೆಗಳ ಕುರಿತಂತೆ ಒಂದು ಮನವಿಯನ್ನು ನೀಡಿದ್ದಲ್ಲಿ ಮತ್ತು ಇಲ್ಲಿಯ ಸಮಸ್ಯೆಗಳ ಕುರಿತಂತೆ ವಿಸ್ತೃತವಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಲ್ಲಿನ ಚರ್ಮದ ಅಲರ್ಜಿ ಮತ್ತು ಅಪೌಸ್ಟಿಕತೆಗೆ ಸಂಬಂಧ ಪಟ್ಟಂತೆ ತಾಲೂಕು ವೈದ್ಯಾಧಿಕಾರಿ ಡಾ. ಅನೀಲಕುಮಾರ ನಾಯ್ಕ್ ಅವರಿಂದ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರ್, ಅಷ್ಪಾಕ್ ಶೇಖ್ ಮತ್ತು ಬಿಜೆಪಿ ಮಂಡಲದ ಅಧ್ಯಕ್ಷ ಬುದವಂತಗೌಡ ಪಾಟೀಲ್, ಯುವ ಮುಖಂಡರಾದ ಭೀಮಸಿ ಬಾದುಲಿ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರಿದ್ದರು. ಎಎಸೈ ನಿಂಬುವಾಲೆ ನೇತೃತ್ವದ ಪೊಲೀಸ ತಂಡ ಸ್ಥಳದಲ್ಲಿ ಹಾಜರಿತ್ತು.

Share This
300x250 AD
300x250 AD
300x250 AD
Back to top