Slide
Slide
Slide
previous arrow
next arrow

ಅನಧಿಕೃತ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್,ತೋಟಗಳ ತೆರವಿಗೆ ಕರವೇಯಿಂದ ಮನವಿ

300x250 AD

ಹಳಿಯಾಳ : ಹಳಿಯಾಳ- ದಾಂಡೇಲಿ – ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಎಲ್ಲ ಅನಧಿಕೃತ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್, ತೋಟಗಳನ್ನು ತೆರವುಗೊಳಿಸಿ, ಆ ಜಾಗದಲ್ಲಿ ಗಿಡ ನೆಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣವು ಹಳಿಯಾಳ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರಿಗೆ ಶುಕ್ರವಾರ ಲಿಖಿತ ಮನವಿಯನ್ನು ನೀಡಿದೆ.

ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಶಿರೂರು ಮತ್ತು ಕೇರಳದ ವೈನಾಡು ಗುಡ್ಡ ಕುಸಿತ ಘಟನೆ ಸರಕಾರಕ್ಕೆ ಮಾತ್ರವಲ್ಲ, ಇಡೀ ನಾಗರೀಕ ಜಗತ್ತಿಗೂ ಕೂಡಾ ಎಚ್ಚರಿಕೆಯ ಗಂಟೆ ಯಾಗಿದೆ. ಹಳಿಯಾಳ – ದಾಂಡೇಲಿ – ಜೋಯಿಡಾ ವಿಧಾನ ಸಭಾ ಕ್ಷೇತ್ರ ದಟ್ಟಡವಿಗೆ ಹೆಸರಾದಷ್ಟೇ ವ್ಯಾಪಕವಾಗಿ ಅದರ ಒತ್ತುವರಿಗೂ ಕೂಡಾ ಹೆಸರಾಗಿದೆ. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉದ್ದಕ್ಕೂ ಎಲ್ಲೊಂದರಲ್ಲಿ ಅನಧಿಕೃತ ರೆಸಾರ್ಟ್, ಹೋಟೆಲ್, ಹೋಮ್ ಸ್ಟೇ, ತೋಟಗಳು ತಲೆ ಎತ್ತಿವೆ. ಇವುಗಳನ್ನು ನಿರ್ಮಿಸುವುದಕ್ಕಾಗಿ ಸಂಬಂಧ ಪಟ್ಟವರು ಬಹಳ ದೊಡ್ಡ ಪ್ರಮಾಣದಲ್ಲಿ ಅರಣ್ಯವನ್ನು ನಾಶ ಮಾಡಿದ್ದಾರೆ. ಪರಿಣಾಮ ಭೂ ಸವಳಿಕೆ, ಭೂಸಾರ ಸವಳಿಕೆ, ಭೂ ಕುಸಿತ, ಗುಡ್ಡ ಕುಸಿತ, ವನ್ಯ ಜೀವಿಗಳ ನಾಶ ಮತ್ತು ವಲಸೆ, ಅರಣ್ಯ ನಾಶ ದಂತಹ ಹಲವಾರು ಅವಘಡಗಳು ಸಂಭವಿಸಿವೆ ಮತ್ತು ಸಂಭವಿಸುತ್ತಿವೆ.

ಇದನ್ನು ಯಥಾ ಸ್ಥಿತಿ ಮುಂದುವರೆಯುವುದಕ್ಕೆ ಬಿಟ್ಟರೆ, ಶಿರೂರು ಮತ್ತು ವೈನಾಡು ದುರಂತ ನಮ್ಮಲ್ಲೂ ಕೂಡಾ ಸಂಭವಿಸುವ ಸಾಧ್ಯತೆಗಳಿದೆ‌. ಆದ್ದರಿಂದ ಪ್ರಸ್ತುತ ಮತ ಕ್ಷೇತ್ರದ ಉದ್ದಕ್ಕೂ ವಾಣಿಜ್ಯ ಕಾರಣಗಳಿಗಾಗಿ ಅತಿಕ್ರಮಿಸಲ್ಪಟ್ಟಿರುವ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು, ಆ ಭೂಮಿಯಲ್ಲಿ ಗಿಡಗಳನ್ನು ನೆಟ್ಟು, ಕಿರು ಅರಣ್ಯಗಳನ್ನು ಸೃಷ್ಟಿಸಬೇಕು. ಆ ಮೂಲಕ ಪರಿಸರದ ಸಮತೋಲನ ಸಾಧಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣದ ಹಳಿಯಾಳ ಘಟಕದ ಅಧ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ ಹಾಗೂ ಸಂಘಟನೆಯ ಪ್ರಮುಖರುಗಳಾದ ವಿನೋದ್ ದೊಡ್ಡಮನಿ, ಚಂದ್ರಕಾಂತ ದುರ್ವೆ, ಮಹೇಶ್ ಆಣೇಗುಂದಿ, ಸುರೇಶ್ ಕೊಕಿತಕರ, ಸುಧಾಕರ ಕುಂಬಾರ, ಪರಶುರಾಮ ಶಹಾಪೂರಕರ, ನಾಗೇಶ ಹೆಗಡೆ, ಲಕ್ಷ್ಮಣ ಪೆಡ್ನೇಕರ, ಆನಂದ ಮಠಪತಿ, ಈರಯ್ಯ ಹಿರೇಮಠ, ಪ್ರಭು ದೇಸಾಯಿ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top