ದಾಂಡೇಲಿ: ನಗರ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಮಾದಕ ಪದಾರ್ಥ ಸೇವನೆ ಹಾಗೂ ಮಾರಾಟ ಹಾಗೂ ಓಸಿ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಗುರುವಾರ ನಗರ ಪೊಲೀಸ್ ಠಾಣೆಗೆ ಕರೆಸಿ ಪರೇಡ್ ಮಾಡಿಸಲಾಯಿತು.
ಪೊಲೀಸ್ ಉಪಾಧಿಕ್ಷಕರಾದ ಶಿವಾನಂದ ಮದರಕಂಡಿ ಆರೋಪಿಗಳನ್ನು ಉದ್ದೇಶಿಸಿ ಎಲ್ಲಾ ಆರೋಪಿಗಳು ಮುಂದಿನ ದಿನಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹಾಗೂ ಯಾವುದೇ ಅಕ್ರಮಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ಭೀಮಣ್ಣ ಸೂರಿ, ನಗರ ಠಾಣೆಯ ಪಿಎಸ್ಐಗಳಾದ ಐ.ಆರ್. ಗಡ್ಡೇಕರ್ ಹಾಗೂ ಯಲ್ಲಪ್ಪ.ಎಸ್ ಹಾಜರಿದ್ದರು.