Slide
Slide
Slide
previous arrow
next arrow

ನಗುಮೊಗದ ಎಎಸ್ಐ ಪುಟ್ಟೇಗೌಡರಿಗೆ ಸೇವಾ ನಿವೃತ್ತಿ

300x250 AD

ದಾಂಡೇಲಿ : ವಯಸ್ಸು ಅರವತ್ತಾದರೂ ಇನ್ನೂ 30ರ ಎನರ್ಜಿಟಿಕ್ ಯುವಕರಂತಿರುವ ಕ್ರಿಯಾಶೀಲ ವ್ಯಕ್ತಿತ್ವದ ಜಂಟಲ್ ಮ್ಯಾನ್ ವ್ಯಕ್ತಿಯೇ ಪುಟ್ಟೇಗೌಡ್ರು. ಗೌಡ್ರು ಎಂದೇ ಚಿರಪರಿಚಿತರಾಗಿರುವ ನಮ್ಮ ಪುಟ್ಟೇಗೌಡರು ಪುಟ್ಟ ಮಕ್ಕಳ ಹೃದಯವನ್ನು ಕೂಡ ಗೆದ್ದಂತಹ ಪೊಲೀಸ್ ಅಧಿಕಾರಿ.

ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಪುಟ್ಟೇಗೌಡರು ಜೋಯಿಡಾದಲ್ಲಿ ಕಳೆದ ಕೆಲವು ವರ್ಷಗಳಿಂದ ಎಎಸ್ಐ ಆಗಿ ಸೇವೆಯನ್ನು ಸಲ್ಲಿಸಿ, ಇದೀಗ ನಿವೃತ್ತಗೊಂಡಿದ್ದಾರೆ.

ಒಂದೆಡೆ ದಟ್ಟ ಕಾಡು, ಇನ್ನೊಂದೆಡೆ ದುರ್ಗಮವಾದ ರಸ್ತೆಗಳು. ಈ ನಡುವೆಯೂ ಜೋಯಿಡಾದ ಪೊಲೀಸ್ ಇಲಾಖೆಯ 112 ತುರ್ತು ಸೇವಾ ಘಟಕದಲ್ಲಿ ಅತ್ಯುತ್ತಮವಾಗಿ ಸೇವೆಯನ್ನು ಸಲ್ಲಿಸಿದ ಕೀರ್ತಿ ಪುಟ್ಟೇಗೌಡರಿಗೆ ಸಲ್ಲಬೇಕು. 112ಗೆ ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆ ಸ್ಥಳಕ್ಕೆ ಹೋಗಿ ಅವರ ಸ್ಪಂದಿಸುವಿಕೆಯ ಗುಣ ಇದೆಯಲ್ಲ, ಯುವಕರನ್ನು ಕೂಡ ನಾಚಿಸಬೇಕು ಕಣ್ರೀ. ಡೈನಾಮಿಕ್ ಪರ್ಸನಾಲಿಟಿಯ ಈ ನಮ್ಮ ಪುಟ್ಟೇಗೌಡರು ಅತ್ಯುತ್ತಮ ಪೊಲೀಸ್ ಅಧಿಕಾರಿಯಾಗಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

300x250 AD

ನಗುವಿನ ಮೂಲಕವೇ ಮಾತು ಆರಂಭಿಸುವ ಪುಟ್ಟೇಗೌಡರ ನಿವೃತ್ತ ಜೀವನಕ್ಕೆ ದಾಂಡೇಲಿ ಪೊಲೀಸ್ ಉಪ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶುಭವನ್ನು ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top