Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಶ್ಲೋಕ

300x250 AD

“ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭ್ರತಾಂ ವರಃ | ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕ ಶೃಂಗೋ ಗದಾಗ್ರಜಃ”||

ಭಾವಾರ್ಥ: ತೇಜಸ್ಸನ್ನು ಅಂದರೆ ನೀರನ್ನು ಯಾವಾಗಲೂ ವರ್ಷಿಸುತ್ತಿರುವವನು (ಅಂದರೆ ಮಳೆಗರೆಯುತ್ತಿರುವವನು) ಆದ್ದರಿಂದ ‘ತೇಜೋವೃಷನು’. ದ್ಯುತಿಯನ್ನು ಎಂದರೆ ಅಂಗಗಳ ಕಾಂತಿಯನ್ನು ಧರಿಸಿರುವನಾದ್ದರಿಂದ ‘ದ್ಯುತಿಧರನು’. ಶಸ್ತ್ರಗಳನ್ನು ಧರಿಸಿರುವವರಲ್ಲೆಲ್ಲ ಶ್ರೇಷ್ಠನು.ಆದ್ದರಿಂದ ‘ಸರ್ವಶಸ್ತ್ರಭೃತಾಂ ವರನು’.ಭಕ್ತರು ತಂದು ಸಮರ್ಪಿಸಿದ ಎಲೆ,ಹೂ, ಮೊದಲಾದವುಗಳನ್ನು ಸ್ವೀಕರಿಸುತ್ತನಾದ್ದರಿಂದ ‘ಪ್ರಗ್ರಹನು’.ಎಲ್ಲರನ್ನು ತನ್ನ ವಶ ದಲ್ಲಿರಿಸಿಕೊಂಡವನು. ಆದ್ದರಿಂದ ‘ನಿಗ್ರಹನು’. ಭಕ್ತನನ್ನು ತನ್ನೊಳಗೆ ಸೆಳೆದುಕೊಳ್ಳುವವವನು. ಯಾವನಾದರೂ  ಹೊರಪ್ರಪಂಚದಿಂದ ಸ್ವಲ್ಪ ತನ್ನೊಳಗೆ ತಿರುಗಿದರೂ,ಅವನಿಗೆ ತನ್ನ ಶಾಂತಿ, ಆನಂದ, ಉಲ್ಲಾಸ ಕರುಣಿಸಿ ತನ್ನಲ್ಲೇ ನಿಲ್ಲುವಂತೆ ಮಾಡುತ್ತಾನೆ. ‘ವ್ಯಗ್ರನು’ ಯಾಕೆಂದರೆ ಇವನ ಅಂತ ನಾಶವಾಗಿದೆ. ಅಂದರೆ ಅನಂತನಾಗಿದ್ದಾನೆ. ಆದ್ದರಿಂದ ‘ವ್ಯಗ್ರನು’ ಅಥವಾ ಭಕ್ತರಿಗೆ ಬೇಕೆನಿಸುವದನ್ನು ಕೊಡುವಿಕೆಯಲ್ಲಿ ವ್ಯಗ್ರನಾಗಿರುತ್ತಾನೆ. ಆದ್ದರಿಂದ ‘ವ್ಯಗ್ರನು’ ಎಂದಾದರೂ ಅರ್ಥೈಸಬಹುದು. ‘ಚತುಃಶೃಙ್ಗ’  ಎಂದರೆ ನಾಲ್ಕು ಕೋಡುಗಳು ಇರುವಾತನು.ಆದ್ದರಿಂದ ‘ನೈಕಶೃಂಗನು. ಗದನೆಂಬವನು ಶ್ರೀ ವಾಸುದೇವನ ತಮ್ಮನು. ಅವನಿಗಿಂತ ಮುಂಚೆ ಹುಟ್ಟಿದವ ನಾದ್ದರಿಂದ ‘ಗದಾಗ್ರಜನು’

ಶ್ಲೋಕದ ವೈಶಿಷ್ಟ್ಯತೆ:- ಈ ಸ್ತೋತ್ರವನ್ನು ಉತ್ತರಾಷಾಢ ನಕ್ಷತ್ರದ ೧ನೆ ಪಾದದಲ್ಲಿ ಜನಿಸಿದವರು ಪ್ರತಿನಿತ್ಯ ೧೧ ಬಾರಿ ಹೇಳಿಕೊಳ್ಳುವ ವಿಷ್ಣು ಸಹಸ್ರನಾಮ ಸ್ತೋತ್ರ. ಆದರೂ ನಮ್ಮ ಗ್ರಹಚಾರ ಸರಿಯಿಲ್ಲದಿದ್ದಾಗ,ನವಗ್ರಹಗಳಲ್ಲಿ ಯಾವುದೇ ಗ್ರಹ ನಮ್ಮ ವಿರುದ್ಧವಾಗಿದೆ ಎಂದು ಕಂಡುಬಂದಾಗ ನಾವು ಮಾಡುವ ಒಳ್ಳೆಯ ಕೆಲಸಗಳೂ ಇತರರಿಗೆ ಕೆಟ್ಟದಾಗಿ ಕಾಣುತ್ತದೆ. ಆತ್ಮೀಯರೂ, ಅಭಿಮಾನಿಗಳೂ, ನಮ್ಮವರು ಎಂದು ನಾವು ನಂಬಿಕೊಂಡವರೂ ದೂರ ಸರಿಯುತ್ತಾರೆ.ನಾವು ಮುಟ್ಟಿದ್ದೆಲ್ಲಾ ಮಣ್ಣಾಗುತ್ತಿದೆ ಎಂಬ ಭಾವನೆ ಬರುತ್ತದೆ.ಅಂತಹ ಸಂದರ್ಭಗಳಲ್ಲಿ ದೋಷವನ್ನು ನಿಗ್ರಹ ಮಾಡಿ ಸಕಲ ಗ್ರಹಬಲವನ್ನು ನಮಗೆ  ತಂದುಕೊಟ್ಟು ನಾವು ಮುಟ್ಟಿದ್ದೆಲ್ಲಾ ಬಂಗಾರವಾಗುವಂತೆ ಮಾಡಿ ನಮ್ಮನ್ನು ಅಪಯಶಸ್ಸಿನಿಂದ ಯಶಸ್ಸಿನೆಡೆಗೆ ಕರೆದೊಯ್ಯಲು ಈ  ಸ್ತೋತ್ರವನ್ನು ಎಲ್ಲರೂ  ಪ್ರತಿನಿತ್ಯ ಹೇಳಿಕೊಂಡು ದೋಷ ಪರಿಹರಿಸಿಕೊಳ್ಳಬಹುದು.

300x250 AD

(ಸಂ:-ಡಾ. ಚಂದ್ರಶೇಖರ ಎಲ್.ಭಟ್ ಬಳ್ಳಾರಿ)

Share This
300x250 AD
300x250 AD
300x250 AD
Back to top