ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಸೋಮವಾರ ಸಿದ್ದಾಪುರ ತಾಲೂಕಿನ ಹಲಗೇರಿ ಹಾಗೂ ವಾಜಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಸ್ಥಳಗಳನ್ನು ವೀಕ್ಷಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿದ್ದಾಪುರ ತಾಲೂಕಿನ ದೊಡ್ಡಗದ್ದೆಯ ಅಂಗನವಾಡಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಹಾಗೂ ಶಾಲೆಯ ಸ್ಥಿತಿಗತಿಯ ಮಾಹಿತಿ ಪಡೆದುಕೊಂಡರು. ನಂತರ ಸುತ್ಲಮನೆಯ ಪರಿಶಿಷ್ಟ ಕೇರಿಗೆ ಭೇಟಿ ನೀಡಿ ಮಳೆಯಿಂದ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವೈಯಕ್ತಿಕ ಸಹಾಯ ನೀಡಿದರು.
ವಾಜಗೋಡ ಗ್ರಾಮ ಪಂಚಾಯ್ತಿಯ ದಾನ್ಮಾವನ ಹಳೆಬರಗಾಲದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ರಾಮಾ ನಾರಾಯಣ ನಾಯ್ಕ ಇವರ ಮನೆಗೆ ವೀಕ್ಷಿಸಿ ವೈಯಕ್ತಿಕ ಧನಸಹಾಯ ನೀಡಿದರು. ಸುಂಗೊಳ್ಳಿಮನೆಯಲ್ಲಿ ಹಾನಿಯಾದ ದೇವಕಿ ರಾಮಚಂದ್ರ ಹೆಗಡೆ ಇವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಪಂ ಪಿಡಿಓಗೆ ಸೂಚನೆ ನೀಡಿದರು. ವಾಜಗೋಡಿನ ಶ್ರೀಪಾದ ರಾಮಕೃಷ್ಣ ಹೆಗಡೆ ಇವರ ಮನೆ ಹಾನಿಯಾಗಿರುವುದನ್ನು ವೀಕ್ಷಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದರು. ಗಾಳಮಾಂವದಲ್ಲಿ ಮಳೆಯಿಂದ ಹಾನಿಯಾದ ದ್ಯಾವಾ ಪುಟ್ಟಾ ನಾಯ್ಕ ಇವರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ವೈಯಕ್ತಿಕ ಸಹಾಯ ಮಾಡಿದರು. ಸಂಪಖಂಡದ ರಾಮ ದ್ಯಾವಾ ನಾಯ್ಕ ಹಾಗೂ ನಾಗೇಶ ಬೀರಾ ನಾಯ್ಕ ಇವರ ಮನೆ ಹಾನಿಯಾಗಿರುವುದನ್ನು ವೀಕ್ಷಿಸಿ ಆರ್ಥಿಕ ನೆರವು ನೀಡಿದರು. ಜತೆಗೆ ತಾಲೂಕಿನ ಗೊದ್ಲಮನೆಗೆ ಹೋಗುವ ರಸ್ತೆ ಪಕ್ಕ ಧರೆ ಕುಸಿದ ಸ್ಥಳವನ್ನು ವೀಕ್ಷಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತ್ತಲಕೊಪ್ಪ, ಉಪ ತಹಶೀಲ್ದಾರ ಡಿ.ಎಂ.ನಾಯ್ಕ, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಕೆ.ಜಿ.ನಾಗರಾಜ, ಡಿಸಿಸಿ ಉಪಾಧ್ಯಕ್ಷ ವಿ.ಎನ್.ನಾಯ್ಕ, ಪ್ರಧಾನ ಕಾರ್ಯದರ್ಶಿ ಸಿ.ಆರ್.ನಾಯ್ಕ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ, ರೈತ ಮುಖಂಡ ವೀರಭದ್ರ ನಾಯ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಸಾಬ್, ಅಣ್ಣಪ್ಪ ನಾಯ್ಕ ಶಿರಳಗಿ ಮತ್ತಿತರರು ಉಪಸ್ಥಿತರಿದ್ದರು.