Slide
Slide
Slide
previous arrow
next arrow

ಜಿಲ್ಲೆಯ ಮೂರು ನಗರ ಸಭೆಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ಪ್ರಕಟ

300x250 AD

ಅಂತೂ ಇಂತೂ ನಗರಸಭೆಗೆ ಮೀಸಲಾತಿ ಪ್ರಕಟ | ಪಕ್ಷದ ಮುಖಂಡರಿಗೆ ಉಭಯ ಸಂಕಟವಾದ ಆಕಾಂಕ್ಷಿಗಳು

ಕಾರವಾರ: ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ 61 ನಗರ ಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಇದೀಗ ಚಾಲನೆ ದೊರೆತಿದೆ. ಸೋಮವಾರ ರಾಜ್ಯದ 61 ನಗರ ಸಭೆಗಳಿಗೆ ಮೀಸಲು ಕ್ಷೇತ್ರದ ಪಟ್ಟಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಸಭೆಯ ಅಧ್ಯಕ್ಷ ಹುದ್ದೆಯು ಸಾಮಾನ್ಯ, ಉಪಾಧ್ಯಕ್ಷ ಹುದ್ದೆಯು ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.

ಶಿರಸಿ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ದಾಂಡೇಲಿ ನಗರಸಭೆಯ ಅಧ್ಯಕ್ಷ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಹುದ್ದೆಯು ಓಬಿಸಿ ಮಹಿಳೆಗೆ ಮೀಸಲಿರಿಸಲಾಗಿದೆ.

300x250 AD

ಶಿರಸಿ ನಗರ ಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಂದನೇ ಅವಧಿಗೆ ಗಣಪತಿ ನಾಯ್ಕ ಅಧ್ಯಕ್ಷರಾಗಿ ಹಾಗೂ ವೀಣಾ ಶೆಟ್ಟಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅವಧಿ ಮುಗಿಸಿದ್ದಾರೆ. 31 ಸದಸ್ಯರ ಬಲ ಹೊಂದಿರುವ ನಗರಸಭೆಗೆ 17 ಬಿಜೆಪಿ 10 ಕಾಂಗ್ರೆಸ್ 2 ಪಕ್ಷೇತರರು ಹಾಗೂ 1 ಜೆಡಿಎಸ್ ಸದಸ್ಯರು ಆಯ್ಕೆಯಾಗಿರುತ್ತಾರೆ.

ಅಧ್ಯಕ್ಷ ಸ್ಥಾನಕ್ಕೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿ ಒಮ್ಮೆ ಉಪಾಧ್ಯಕ್ಷರಾಗಿರುವ ವೀಣಾ ಶೆಟ್ಟಿ ಹಾಗು ಪ್ರಥಮ ಬಾರಿಗೆ ಸದಸ್ಯರಾಗಿರುವ ಮತ್ತು ಬಿ ಎ ಪದವಿಧರರಾಗಿರುವ ಶರ್ಮಿಳಾ ಮಾದನಗೇರಿ ಪ್ರಬಲ ಆಕಾಂಕ್ಷಿಯಾಗಿದ್ದು ಇದು ಬಿಜೆಪಿ ಹೈಕಮಾಂಡ್ ಗೆ ಬಿಸಿ ತುಪ್ಪವಾಗುವ ಸಾಧ್ಯತೆಯಿದೆ. ಉಳಿದ ಎಂಟು ಮಹಿಳಾ ಸದಸ್ಯರಾದ ನಾಗರತ್ನ , ದೀಪಾ, ಮುಕ್ತಾ, ಸಂಧ್ಯಾ, ಸುಮಿತ್ರಾ, ಶಾರದಾ, ಮಾಲತಿ ಹಾಗು ಪ್ರೀಯಾ ನಾಯ್ಕ್ ಆಕಾಂಕ್ಷಿಗಳಾದರೂ ಇವರಲ್ಲಿ ಯಾರು ಕೂಡಾ ಆಕಾಂಕ್ಷಿ ಆಗಬಹುದಾದರೂ, ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹದು. ಇದರ ಮದ್ಯ ವಿರೋಧ ಪಕ್ಷ ಕಾಂಗ್ರೆಸ್ ಕೂಡಾ ಆಟ ಆಟವಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Share This
300x250 AD
300x250 AD
300x250 AD
Back to top