Slide
Slide
Slide
previous arrow
next arrow

ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪಡ್ಡೆ ಹುಡುಗರ ಮೇಲೆ ಸೂಕ್ತ ಕ್ರಮಕ್ಕೆ ರವಿ ಗಾಂವಕರ ಆಗ್ರಹ

300x250 AD

ದಾಂಡೇಲಿ : ನಗರದ ವಿವಿಧ ಕಾಲೇಜುಗಳನ್ನು ಹೊಂದಿರುವ ರಸ್ತೆಗಳ ಹತ್ತಿರ ಕಾಲೇಜು ಆರಂಭವಾಗುವ ಮುನ್ನ ಮತ್ತು ಕಾಲೇಜು ಬಿಡುವ ವೇಳೆಯಲ್ಲಿ ಪಡ್ಡೆ ಹುಡುಗರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮಾನಸಿಕವಾಗಿ ನೊಂದುಕೊಳ್ಖುತ್ತಿದ್ದಾರೆ. ಇದು ಹೀಗೆನೇ ಬಿಟ್ಟರೆ ಮುಂದಿನ ದಿನಗಳಲ್ಲಿ ಅನಾಹುತಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಮುಖವಾಗಿ ನಗರದ ಬರ್ಚಿ ರಸ್ತೆಯಲ್ಲಿ ಕಾಲೇಜು ಆರಂಭ ಮತ್ತು ಬಿಡುವ ಸಮಯದಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಪಡ್ಡೆ ಹುಡುಗರ ಇಂತಹ ಕುಚೇಷ್ಟೆಗಳನ್ನು ನಿಯಂತ್ರಿಸಲು ದಾಂಡೇಲಿ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ರವಿ ಗಾಂವಕರ ಮನವಿಯನ್ನು ಮಾಡಿದ್ದಾರೆ.

ಅವರು ಭಾನುವಾರ ದಾಂಡೇಲಿ ನಗರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಡ್ಡೆ ಹುಡುಗರ ಕುಚೇಷ್ಟೆಗಗಳು ಎಲ್ಲೇ ಮೀರಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಕಡಿವಾಣ ಹಾಕದಿದ್ದಲ್ಲಿ ಇದು ಮತ್ತೆ ಮುಂದುವರಿದು ಅನಾಹುತಕಾರಿ ಘಟನೆಗಳಿಗೆ ಪುಷ್ಠಿ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಪ್ರವಾಸೋದ್ಯಮವಾಗಿ ಬೆಳೆಯುತ್ತಿರುವ ದಾಂಡೇಲಿ ನಗರದಲ್ಲಿ ಗಾಂಜಾ ವ್ಯಾಪಕವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಗಾಂಜಾ ಸೇವನೆ ಮಾಡುವವರನ್ನು ಮತ್ತು ಗಾಂಜಾ ಮಾರಾಟ ಮಾಡುವವರನ್ನು ಹಿಡಿದು, ಅಂತವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತದೃಷ್ಟಿ ಮತ್ತು ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕಾದ ನಿಟ್ಟಿನಲ್ಲಿ ನಗರದ ಬರ್ಚಿ ರಸ್ತೆಯಲ್ಲಿ ಕಾಲೇಜು ಆರಂಭವಾಗುವ ಮುನ್ನ ಹಾಗೂ ಕಾಲೇಜು ಬಿಡುವ ಸಮಯದಲ್ಲಿ ಪೊಲೀಸರನ್ನು ನಿಯೋಜಿಸಬೇಕೆಂದು ರವಿ ಗಾಂವಕರ ಅವರು ಮನವಿಯನ್ನು ಮಾಡಿದರು.

300x250 AD

ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ತುಕಾರಾಮ ಬಿಂಗೆ, ಪ್ರಧಾನ ಕಾರ್ಯದರ್ಶಿ ಪ್ರಮೋದ ಕದಂ, ಪಕ್ಷದ ಮುಖಂಡರಾದ ರೂಪೇಶ್ ಪವಾರ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top