ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸುವುದರ ಮೂಲಕ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ಗುರುಗಳನ್ನ ಗೌರವಿಸಿದ್ದಲ್ಲದೆ ಪ್ರೌಢಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕೇತರರನ್ನು ಕೂಡ ಗೌರವಿಸಿದ್ದು ವಿಶೇಷವಾಗಿತ್ತು. ಪಾಲಕರ ವತಿಯಿಂದ ಸತೀಶ್ ನಾಯ್ಕ ಇಂತಹ ಕಾರ್ಯಕ್ರಮ ಮಕ್ಕಳಲ್ಲಿ ಗುರು ಭಾವನೆ ಮತ್ತು ಸಂಸ್ಕಾರ ಮೊಳಕೆ ಒಡೆಯಲು ಸಹಕಾರಿ ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗಣೇಶ ಭಟ್ಟ ವಾನಳ್ಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಾವು ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಮಕ್ಕಳ ಪ್ರೀತಿ, ನಮ್ಮ ಗೌರವ, ಊರ ನಾಗರಿಕರ ಅಭಿಮಾನವನ್ನು ತುಂಬಿ ಗೌರವಿಸಿದ್ದೇವೆ ಕಾರಣ ಶಿಕ್ಷಣದಲ್ಲಿ ಪ್ರಥಮ ಹೆಜ್ಜೆಯನ್ನು ಇಡುವುದನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಾರೆ ಆ ಹೆಜ್ಜೆ ಬಹಳ ಮುಖ್ಯವಾದದ್ದು ಪ್ರಥಮ ಹೆಜ್ಜೆ ಸರಿ ಇದ್ದಲ್ಲಿ ಮುಂದಿನ 100 ಹೆಜ್ಜೆಗಳು ಸರಿಯಾಗಿ ಇರುತ್ತವೆ. ಮಕ್ಕಳು ಕೂಡ ಕಲಿತ ಶಾಲೆ ಕಲಿಸಿದ ಗುರುವನ್ನ ಯಾವತ್ತೂ ನೆನಪಿಟ್ಟು ಗೌರವಿಸುವುದನ್ನು ಕಲಿಯಿರಿ ಎಂದು ನುಡಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಧರ್ ನಾಯಕ್ ಕಂಬಿ ಉಪಸ್ಥಿತರಿದ್ದರು. ಶಿಕ್ಷಕ ಲೋಕನಾಥ ಹರಿಕಂತ್ರ ಗುರುಪೂರ್ಣಿಮೆ ಮಹತ್ವ ಕುರಿತು ಉಪನ್ಯಾಸ ನೀಡಿದರು .ಮಕ್ಕಳೇ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು .