ಪ್ಯಾರಿಸ್: ಭಾರತವು ಪ್ಯಾರಿಸ್ ಒಲಿಂಪಿಕ್‌ನಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿದ್ದು, ಇದೀಗ ಭಾರತಕ್ಕೆ ಮೂರನೇ ಒಲಿಂಪಿಕ್ ಪದಕ ಒಲಿದಿದೆ. ಗುರುವಾರ ನಡೆದ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ, 50 ಮೀಟರ್ ರೈಫಲ್ ಫೈನಲ್‌ಗೆ ಅರ್ಹತೆ ಪಡೆದಿದ್ದರು. 3 ಪೊಸಿಷನ್‌ಗಳಲ್ಲಿ ನಡೆಯುವ 50 ಮೀಟರ್ ರೈಫಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಅವರು, ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.
50 ಮೀಟರ್ ರೈಫಲ್ ಶೂಟಿಂಗ್‌ಅನ್ನು ಮೂರು ಸ್ಥಾನಗಳಲ್ಲಿ ಇದ್ದು ಗುರಿಯತ್ತ ಶೂಟ್ ಮಾಡಬೇಕಾಗುತ್ತದೆ. ಮಂಡಿಯೂರಿ, ಪ್ರೋನ್ ಅಥವಾ ಮಲಗಿದ ಭಂಗಿಯಲ್ಲಿ ಹಾಗೂ ನಿಂತಿರುವ ಭಂಗಿಯಲ್ಲಿ ಗುರಿಯತ್ತ ಶೂಟ್ ಮಾಡಬೇಕಾಗುತ್ತದೆ. ಸ್ವಪ್ನಿಲ್ ಮೊದಲ ಎರಡು ಸುತ್ತುಗಳಲ್ಲಿ ತುಸು ಹಿಂದೆ ಬಿದ್ದರೂ, ಅಂತಿಮ ಸುತ್ತಿನಲ್ಲಿ ಪದಕಕ್ಕೆ ಗುರಿ ಇಟ್ಟಿದ್ದಾರೆ.
ಕೃಪೆ: https://news13.in