Slide
Slide
Slide
previous arrow
next arrow

ಅತಿವೃಷ್ಟಿ: ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ತಿಮ್ಮಪ್ಪ ಮಡಿವಾಳ

300x250 AD

ಸಿದ್ದಾಪುರ : ಈ ವರ್ಷದ ಅತಿವೃಷ್ಟಿ ಹಾಗೂ ಬಿರುಗಾಳಿಯಿಂದಾಗಿ ಸಿದ್ದಾಪುರ ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತವಾಗಿರುತ್ತದೆ. ಅತಿವೃಷ್ಟಿಯಿಂದ ಆಸ್ತಿ-ಪಾಸ್ತಿ ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಈವರೆಗೂ ಸಮರ್ಪಕವಾಗಿ ದೊರೆತಿಲ್ಲ ಪರಿಹಾರ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಆರೋಪಿಸಿದರು.

ಅವರು ಬುಧವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಪೂರ್ವದಲ್ಲಿ ಪ್ರತಿಭಟಿಸಿ ಮಾತನಾಡಿದರು. ರಾಜ್ಯ ಸರಕಾರ ನೀಡಬೇಕಾದ ಹೆಚ್ಚುವರಿ ಪರಿಹಾರ ದೊರಕುತ್ತಿಲ್ಲ. ಈ ಮೊದಲು ಬಿಜೆಪಿ ಸರ್ಕಾರ ಇದ್ದಾಗ ಶೇಕಡಾ 75ಕ್ಕಿಂತ ಹೆಚ್ಚು ಮನೆ ಹಾನಿಯಾದರೆ 5 ಲಕ್ಷ ರೂಪಾಯಿ, ಶೇಕಡಾ 25 ರಿಂದ 50 ರಷ್ಟು ಮನೆಗಳಿಗೆ ಹಾನಿಯಾದರೆ ರೂಪಾಯಿ 1ಲಕ್ಷದ 20 ಸಾವಿರ, ಶೇ. 15 ರಿಂದ 25ರ ವರೆಗೆ ಮನೆಗಳಿಗೆ ಹಾನಿಯಾದರೆ 50ಸಾವಿರ ರೂಪಾಯಿ, ಮನೆಗಳಿಗೆ ನೀರು ನುಗ್ಗಿದರೆ 10 ಸಾವಿರ ರೂಪಾಯಿ ಪರಿಹಾರವಾಗಿ ನೀಡಲಾಗುತಿತ್ತು. ಪ್ರಾಣ ಹಾನಿಯಾದರೆ 5 ಲಕ್ಷ ರೂಪಾಯಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಿದ್ದರು ಈಗಿನ ಸರಕಾರ ಕೇವಲ ಒಂದು ಲಕ್ಷದ ಇಪ್ಪತ್ತು ಸಾವಿರ ಪರಿಹಾರ ನೀಡುತ್ತಿದೆ ಇದು ಯಾವ ಖರ್ಚಿಗೂ ಸಾಲುತ್ತಿಲ್ಲ ಅಲ್ಲದೆ  ಹಣ ಬಿಡುಗಡೆ ಮಾಡುವಲ್ಲಿಯು ವಿಳಂಬ ಧೋರಣೆ ಅನುಸರಿಸುತ್ತಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರದಿಂದ ಈ ಮೊದಲಿನಂತೆ ಪರಿಹಾರ ಬಿಡುಗಡೆಗೆ  ಸೂಚಿಸಬೇಕೆಂದು ಕೋರುತ್ತೇವೆ  ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ಜಿ. ನಾಯ್ಕ ಹಣಜಿ ಬೈಲ್, ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ನಂದನ ಬೋರ್ಕರ್, ಜಿಲ್ಲಾ ವಿಶೇಷ ಆಹ್ವಾನಿತರಾದ ಕೃಷ್ಣಮೂರ್ತಿ ಕಡಕೇರಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top