ಯಲ್ಲಾಪುರ: ಡೆಂಗ್ಯೂ ಜ್ವರವು ಸೋಂಕಿತ ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿದೆ. ಖಾಯಿಲೆ ಬಂದ ನಂತರ ಕಂಗಾಲಾಗುವ ಬದಲು ಖಾಯಿಲೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ತಾಯವ್ವ ಸೋರಗಾಂವಿ ಹೇಳಿದರು.
ಅವರು ಸೋಮವಾರ ಸಂಜೆ ತಾಲೂಕಿನ ಅರಬೈಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಡೆಂಗ್ಯೂ ಜ್ವರದ ಬಂದಾಗ ಒಸಡುಗಳಲ್ಲಿ ರಕ್ತಸ್ರಾವ, ಕಣ್ಣುಗಳ ಹಿಂದೆ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಡೆಂಗ್ಯೂನಿಂದ ಪಾರಾಗಲು ಸ್ವಚ್ಚತೆಯ ಕಡೆ ಗಮನಹರಿಸಬೇಕು. ನೀರು ನಿಲ್ಲದಂತೆ ಕ್ರಮಕೈಗೊಳ್ಳುವುದು, ಅನಾರೋಗ್ಯದ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಮುಖ್ಯಾಧ್ಯಾಪಕಿ ಸಾಹಿತಿ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡೆಂಗ್ಯೂ ಜ್ವರದಿಂದ ಬಳಲುವವರು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ರೋಗ ನಿರೋಧಕ ಆಹಾರ ಸೇವನೆ,ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಶಿಕ್ಷಕರಾದ ರಾಮ ಟಿ.ಗೌಡ,ನಾಗರಾಜ ಆಚಾರಿ, ಭಾಗವಹಿಸಿದ್ದರು.ವಿದ್ಯಾರ್ಥಿನಿ ದೀಕ್ಷಾ ಭಟ್ ನಿರೂಪಿಸಿದರು.