Slide
Slide
Slide
previous arrow
next arrow

ಜು.28ಕ್ಕೆ ಗ್ರಾಮೀಣ ಕೆಸರುಗದ್ದೆ ಆಟ

300x250 AD

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಜು.28 ರವಿವಾರದಂದು ಕೇರವಡಿ ,ದೇವಳಮಕ್ಕಿ ಹಾಗೂ ವೈಲವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಮಿತ ಕೆಸರುಗದ್ದೆ ಪಂದ್ಯಾವಳಿವು ದೇವಳಮಕ್ಕಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ನಡೆಯಲಿದೆ.

ಶಾಲಾ ಹಂತದ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಓಟ ಮತ್ತು ಚಮಚೆ-ಲಿಂಬೆಹಣ್ಣು ನಡಿಗೆ ಸ್ಪರ್ಧೆ, ಯುವತಿಯರಿಗಾಗಿ ಓಟ, ಚಮಚೆ-ಲಿಂಬೆಹಣ್ಣು ನಡಿಗೆ ಸ್ವರ್ಧೆ, ಮಹಿಳೆಯರಿಗಾಗಿ ಓಟ, ಚಮಚೆ-ಲಿಂಬೆಹಣ್ಣು ನಡಿಗೆ ಹಾಗೂ ವೇಗವಾದ ನಡಿಗೆ ಸ್ವರ್ಧೆ ಮಹಿಳೆಯರು ಹಾಗೂ ಯುವತಿಯರಿಗೆ ಸೇರಿ ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆ, ಪುರುಷರಿಗೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್ ಸ್ಪರ್ಧೆ ಏರ್ಪಡಿಸಲಾಗಿದೆ.
ಕೆಸರುಗದ್ದೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಮತ್ತು ವೀಕ್ಷಕರಿಗೆ ಎಲ್ಲರಿಗೂ ಸಾವಯುವ ಪದ್ಧತಿಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ದೇವಳಮಕ್ಕಿ ಕೆಸರುಗದ್ದೆ ಆಟ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top