Slide
Slide
Slide
previous arrow
next arrow

ಸೋರುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ, ರೋಗಿಗಳ ಪರದಾಟ

300x250 AD

ಸುಧೀರ ನಾಯರ್
ಬನವಾಸಿ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿದ್ದು ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 50- 60 ವರ್ಷ ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಎಲ್ಲ ಕಡೆಗಳಲ್ಲಿ ಸೋರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೊರ ರೋಗಿಗಳ ಸಂಖ್ಯೆಯಿರುವ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯನ್ನು ಕಂಡು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು ಸೋರುವಿಕೆಯ ಸಮಸ್ಯೆಯಿಂದಾಗಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ವೃದ್ದರು, ಗರ್ಭಿಣಿಯರು, ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗದೇ ಗಂಟೆಗಟ್ಟಲೆ ನಿಂತುಕೊಂಡೆ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

ನಿರಂತರ ಮಳೆಯಿಂದಾಗಿ ವೈದ್ಯಾಧಿಕಾರಿಗಳ ಕೊಠಡಿ, ರೋಗಿಗಳು ಕುಳಿತುಕೊಳ್ಳುವ ಆಸ್ಪತ್ರೆಯ ಆವರಣ, ವಾರ್ಡಿನ ಕೋಣೆಯ ಮುಂಭಾಗದಲ್ಲಿ ಮಳೆ ನೀರು ಬಹಳಷ್ಟು ಸೋರುತ್ತಿದೆ. ಆರೋಗ್ಯ ಕೇಂದ್ರದ ಒಳ ಭಾಗದಲ್ಲಿ ಕೆಲವು ಕಡೆ ಟೈಲ್ಸ್ ಅವಳವಡಿಕೆ ಮಾಡಿರುವುದರಿಂದ ವೃದ್ದರು, ಗರ್ಭಿಣಿಯರು ನಡೆದಾಡಲು ತೊಂದರೆ ಅನುಭವಿಸುವಂತಾಗಿದೆ. ಕರ್ತವ್ಯ ನಿರ್ವಹಿಸುವ ಆಸ್ಪತ್ರೆಯ ಸಿಬ್ಬಂದಿಗಳು ಭಯದಿಂದಲೇ ನಡೆದಾಡಬೇಕಾಗಿದೆ.

ಗ್ರಾಮೀಣರಿಗೆ ಸ್ಥಳೀಯವಾಗಿ ಔಷಧೋಪಚಾರಗಳು ಸಿಗಬೇಕೆಂಬ ಉದ್ದೇಶದಿಂದ ಸರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿದ್ದು, ಮೂಲ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

300x250 AD

ಮುಂದಿನ ದಿನದಲ್ಲಾದರೂ ಸರಕಾರ, ಜನ ಪ್ರತಿನಿಧಿಗಳು ಇತ್ತಕಡೆ ಗಮನಹರಿಸಿ ಹೊಸ ಕಟ್ಟಡ ನಿರ್ಮಿಸಿ ಈ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಶಾಭಾವನೆಯಾಗಿದೆ.

ಕೋಟ್:
ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಸುಮಾರು 50 ವರ್ಷ ಹಳೆಯದಾಗಿದ್ದು, ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು ಮಳೆಗಾಲದಲ್ಲಿ ಸೋರುತ್ತಿದೆ. ಇದರಿಂದಾಗಿ ಎಲ್ಲರು ತೊಂದರೆಗೆ ಒಳಗಾಗುತ್ತಿದ್ದಾರೆ. ಸಮಸ್ಯೆಯನ್ನು ಶಾಸಕರ ಹಾಗೂ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ.ಡಾ. ಜಯಶ್ರೀ ಹೆಗಡೆ
ವೈದ್ಯಾಧಿಕಾರಿಗಳು
ಪ್ರಾಥಮಿಕ ಆರೋಗ್ಯ ಕೇಂದ್ರ, ಬನವಾಸಿ

Share This
300x250 AD
300x250 AD
300x250 AD
Back to top