ಭಟ್ಕಳ: ರಸ್ತೆ ಪಕ್ಕದಲ್ಲಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ಸ್ವಚ್ಛತೆ ಮಾಡಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಯಮ್ಮಿಸ್ ಹೋಟೆಲ್ ಸಮೀಪ ಶನಿವಾರ ಬೆಳ್ಳಿಗ್ಗೆ ನಡೆದಿದೆ.
ಈ ಭಾಗದಲ್ಲಿ ಪ್ರತಿದಿನ ಕಸ ಎಸೆದು ಹೋಗುತ್ತಿರುವುದನ್ನು ಜಾಲಿ ಪಟ್ಟಣ ಪಂಚಾಯತ ಆರೋಗ್ಯ ಅಧಿಕಾರಿ ವಿನಾಯಕ ಗಮನಿಸುತ್ತಿದ್ದರು. ಅದರಂತೆ ಶನಿವಾರ ಸ್ಥಳೀಯ ವ್ಯಕ್ತಿಯೋರ್ವ ಬೈಕ್‌ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ ಸಮೀಪದ ಯಮ್ಮಿಸ್ ಹೋಟೆಲ್ ಸಮೀಪ ಕಸ ಎಸೆದು ಹೋಗುತ್ತಿರುದನ್ನು ನೋಡಿದ ಸ್ಥಳೀಯ ವ್ಯಕ್ತಿಯೋರ್ವ ಅಲ್ಲೇ ಇದ್ದ ಜಾಲಿ ಪಟ್ಟಣದ ಪಂಚಾಯತ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಿಬ್ಬಂದಿಗಳು ಆರೋಗ್ಯ ಅಧಿಕಾರಿ ವಿನಾಯಕ ಅವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಆರೋಗ್ಯ ಅಧಿಕಾರಿ ವಿನಾಯಕ ಆತನನ್ನು ಹಿಡಿದು ಅಲ್ಲಿದ್ದ ಎಲ್ಲಾ ಕಸವನ್ನು ಆತನಿಂದಲೇ ಸ್ವಚ್ಛಗೊಳಿಸಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈಲರ್ ಆಗಿದ್ದು ಆರೋಗ್ಯ ಅಧಿಕಾರಿ ವಿನಾಯಕ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ದೂರವಾಣಿ ಕರೆ ಮೂಲಕ ಮಾತಮಾಡಿ ಆರೋಗ್ಯ ಅಧಿಕಾರಿ ವಿನಾಯಕ ಈ ಭಾಗದಲ್ಲಿ ಕೆಲ ದಿನಗಳಿಂದ ಕಸ ಎಸೆಯುತ್ತಿರುವುದನ್ನು ಗಮನಯುತ್ತಿದ್ದೆ. ಇಂದು ಸ್ಥಳೀಯ ವ್ಯಕ್ತಿಯ ಸಹಾಯದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಸ್ಥಳಗಳಲ್ಲಿ ಈ ರೀತಿ ಕಸ ಎಸೆಯುವವರಿಂದಲೇ ಈ ರೀತಿ ಕೆಲಸ ಮಾಡಿಸಿದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ