ಕಾರವಾರ: ಕಾರವಾರ ಅಂಚೆ ವಿಭಾಗಕ್ಕೆ ಉತ್ತರ ಕರ್ನಾಟಕ ಪ್ರಾದೇಶಿಕ ಮಟ್ಟದ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ತೆರೆಯುವ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ಕ್ಷೇತ್ರ ಅಧಿಕಾರಿಗಳ ಪ್ರಶಸ್ತಿ ಸೇರಿ ಒಟ್ಟು 15 ಪ್ರಶಸ್ತಿಗಳು ಲಭಿಸಿವೆ ಎಂದು ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಆರ್ಥಿಕ ವರ್ಷ 2023-24 ದಲ್ಲಿ ಕಾರವಾರ ಅಂಚೆ ವಿಭಾಗಕ್ಕೆ 85000 ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ತೆರೆಯುವ ಗುರಿಯನ್ನು ನೀಡಲಾಗಿತ್ತು. ಎಲ್ಲಾ ಅಂಚೆ ಸಿಬ್ಬಂದಿಗಳ ಅವಿರತ ಪರಿಶ್ರಮದಿಂದ 90128 ಸಣ್ಣ ಉಳಿತಾಯ ಖಾತೆಗಳನ್ನು ತೆರೆದು ಗುರಿಯನ್ನು ದಾಟಿ ಶೇ.106 ಗುರಿ ಸಾಧಿಸಿ, ಉತ್ತರ ಕರ್ನಾಟಕ ಪ್ರಾದೇಶಿಕ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು, ಇನ್ನೆರಡು ವಿಭಾಗಗಳಲ್ಲಿ ತೃತೀಯ ಹಾಗೂ ಐದನೇ ಸ್ಥಾನಗಳನ್ನು ಗಳಿಸಿಕೊಂಡಿದೆ.
ಇದರ ಜೊತೆಗೆ ಕಾರವಾರ ಅಂಚೆ ವಿಭಾಗದ 6 ಗ್ರಾಮೀಣ ಅಂಚೆಪಾಲಕರು (ವಂದನ ನಾಯ್ ಮತ್ತು ತನುಜಾ, ಊರು ಕೇರಿ ಶಾಖೆ -2 ಪ್ರಶಸ್ತಿಗಳು, ಇಂದಿರಾ ನಾಯ್ ಮತ್ತು ನೇತ್ರಾವತಿ ನಾಯ್ಕ ಮುಟ್ಟುಳ್ಳಿ ಶಾಖೆ-2 ಪ್ರಶಸ್ತಿಗಳು, ಪ್ರೇಮಾನಂದ ಕಾಮತ್ ಹಿಲ್ಲೂರು ಶಾಖೆ-1 ಪ್ರಶಸ್ತಿ, ಶ್ರೀಧರ ಹೆಗಡೆ ಮತ್ತು ಜಯಂತ ಪಟಗಾರ, ನೀಳ್ಕೊಡು ಶಾಖೆ-1 ಪ್ರಶಸ್ತಿ, ಮುಖ್ಯ ಅಂಚಪಾಲಕರು-1, ನಿರಂಜನ ಮುಖ್ಯ ಅಂಚೆಪಾಲಕ ಅಂಕೋಲಾ-1 ಪ್ರಶಸ್ತಿ), ಹೊನ್ನಾವರ ಉಪ ವಿಭಾಗದ ಅಂಚೆ ನಿರೀಕ್ಷಕ ಕೆ.ಎಚ್. ಸಂಕಟ್ಟಿ – 2 ಪ್ರಶಸ್ತಿಗಳು, ಕುಮಟಾ ಉಪ ವಿಭಾಗದ ಅಂಚ ನಿರೀಕ್ಷಕ ಗಿರೀಶ್ ಡಿ ಕುಮಾರ್ -1 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಗ್ರಾಮೀಣ ಅಂಚೆ ಜೀವ ವಿಮಾ ಕ್ಷೇತ್ರೀಯ ಅಧಿಕಾರಿಗಳ ವಿಭಾಗದಲ್ಲಿ ನಾರಾಯಣ ದೇವಾಡಿಗ ಪಥಮ ಹಾಗೂ ಶಿವಾನಂದ ಶೆಟ್ಟಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಾಧನೆ ತೋರಿದ ಸಾಧಕರಿಗೆಲ್ಲ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
ಸಾರ್ವಜನಿಕರು ಕೇಂದ್ರ ಸರ್ಕಾರದ ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಕಚೇರಿಯ ಅಪಘಾತ ವಿಮೆ, ವಾಹನ ವಿಮೆ. ಹಾಗೂ ಆರೋಗ್ಯ ವಿಮೆ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮೀಪದ ಅಂಚೆ ಕಚೇರಿಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.