Slide
Slide
Slide
previous arrow
next arrow

ಕವಯತ್ರಿ ಮಧುರಾ ಗಾಂವ್ಕರ್‌ಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ

300x250 AD

ಯಲ್ಲಾಪುರ: ತಾಲೂಕಿನ ವಾಗಳ್ಳಿಯ ಕವಯಿತ್ರಿ, ಹವ್ಯಾಸಿ ಯಕ್ಷಗಾನ ಕಲಾವಿದೆ, ಕಲಾ ಕೌಸ್ತುಭ ಸಂಸ್ಥೆಯ ಅಧ್ಯಕ್ಷೆ ಮಧುರಾ ಗಾಂವ್ಕರ ಅವರಿಗೆ ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ & ಪಬ್ಲಿಕೇಶನ್ ವತಿಯಿಂದ ನೀಡುವ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಕವಿ ಸಂಭ್ರಮೋತ್ಸವ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ನೂರಾರು ಕವಿಗಳ ಆಯ್ದ ಕವನಗಳ ಸಂಕಲನವಾದ ‘ಭಾವ ಮಂಜುಷಾ’ ಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಪುಸ್ತಕಕ್ಕೆ ಮಧುರಾ ಗಾಂವ್ಕರ ಬೆನ್ನುಡಿಯನ್ನು ಬರೆದು ಕವನ ಸಂಕಲನಕ್ಕೆ ಹೆಸರನ್ನು ಸೂಚಿಸಿದ್ದರು. ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಅಕ್ಷರನಾದ ಪಬ್ಲಿಕೇಷನ್ ರಾಜ್ಯಾಧ್ಯಕ್ಷೆ ಶ್ರುತಿ ಮಧುಸೂದನ್ ರುದ್ರಾಗ್ನಿ ಹಾಗೂ ಪದಾಧಿಕಾರಿಗಳು ಗಾಂವ್ಕರ ಅವರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದರು .

300x250 AD

ಈ ವೇಳೆ ಮಾತನಾಡಿದ ಮಧುರ ಗಾಂವ್ಕರ, ಕನ್ನಡದ ಸಾಹಿತ್ಯದ ವಿವಿಧ ಕಾಲಘಟ್ಟಗಳು – ಕವಿಗಳ ಕೊಡುಗೆಗಳು ಕುರಿತು ವಿವರಿಸಿ, ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೀ ರಾಮಾಯಣ ದರ್ಶನದ ಸಮೃದ್ಧತೆಯನ್ನು ಮಹಾಛಂದಸ್ಸಿನ ನಾವೀನ್ಯತೆಯ ಕುರಿತು ಮಾತನಾಡಿದರು. ಕುವೆಂಪು ಅವರ ಸಾಹಿತ್ಯದ ವಿವಿಧ ಪ್ರಕಾರಗಳು ಮತ್ತು ಅವರ ಕಾವ್ಯದಲ್ಲಿ ದೊರೆಯುವ ಭಾವ ಭಿನ್ನತೆಯ ಸಾಹಿತ್ಯ ಸೊಬಗನ್ನು ಪ್ರಕಟಿಸಿದ ರೀತಿ , ಶಬ್ದ ಜ್ಞಾನ ಮತ್ತು ಇಂದಿನ ಹೊಸ ಬರಹಗಾರರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಬರಹಗಾರರು ಲೇಖನಿ ಹಿಡಿಯುವ ಮೊದಲು ಪುಸ್ತಕ ಹಿಡಿದರೆ ಮಾತ್ರವೇ ಪಕ್ವತೆಯ ಬರಹ ಸಾಧ್ಯ. ಅಧ್ಯಯನವೇ ಭಾವ ಪ್ರಕಟಣೆಗೆ ಮೂಲ ಸರಕು. ಕನ್ನಡದ ಸಮೃದ್ಧ ಸಾಹಿತ್ಯವನ್ನು ಆದಷ್ಟು ಓದಿ ಅರಗಿಸಿಕೊಂಡು ಬರಹಗಾರರಾಗಬೇಕು ಎಂದು ಹೇಳಿದರು.

Share This
300x250 AD
300x250 AD
300x250 AD
Back to top