Slide
Slide
Slide
previous arrow
next arrow

ಗ್ರಾಮ ಪಂಚಾಯಿತಿಯ ಸದಸ್ಯರನ್ನೇ ಯಾಮಾರಿಸಿ ಎನ್ಒಸಿ ಕೊಟ್ಟ ಕಾರ್ಯದರ್ಶಿ

300x250 AD

ಸಂದೇಶ್ ಎಸ್.ಜೈನ್

ಜೋಯಿಡಾ : ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಒಮ್ಮತದ ತೀರ್ಮಾನದಡಿಯಲ್ಲಿ ಹಾಗೂ ಪಿಡಿಓ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕಾದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಇಡೀ ಗ್ರಾಮ ಪಂಚಾಯಿತಿಯನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಹುಚ್ಚು ಸಾಹಸಕ್ಕೆ ಕೈ ಹಾಕುವ ಮೂಲಕ ತನ್ನ ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವ ಕೆಲಸ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರಿಂದ ಆಗತೊಡಗಿದೆ.

ತಮ್ಮ ತಮ್ಮ ವಾರ್ಡ್ಗಳ ಸಮಗ್ರ ಅಭಿವೃದ್ಧಿಗಾಗಿ ಆರಿಸಿ ಬಂದ ಗ್ರಾಮ ಪಂಚಾಯಿತಿಯ ಸದಸ್ಯರು ತಮ್ಮ ವಾರ್ಡಿನ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮಾತ್ರ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೂ ಬಾರದೇ ಇದ್ದರೂ, ಎನ್.ಓ. ಸಿ ಯನ್ನು ಕೊಡುವ ಮೂಲಕ ಪ್ರಧಾನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಯಾಮಾರಿಸಿರುವ ಬಗ್ಗೆ ಸದ್ದಿಲ್ಲದೆ ಸುದ್ದಿಯಾಗತೊಡಗಿದೆ.

ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಯವರ ಮೇಲೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಇಟ್ಟ ನಂಬಿಕೆಯನ್ನು ಹುಸಿಗೊಳಿಸಿದ ಈ ಕಾರ್ಯದರ್ಶಿಯನ್ನು ಇನ್ನೂ ಇದೇ ಗ್ರಾಮ ಪಂಚಾಯಿತಿಯಲ್ಲಿ ಮುಂದುವರಿಸಿದರೇ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಗೌರವಕ್ಕೆ ಮತ್ತು ಅವರವರ ವಾರ್ಡಿನ ಅಭಿವೃದ್ಧಿಗೂ ಮಾರಕ ಹೊಡೆತವಾಗಲಿದೆ.

ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಅವರವರ ವಾರ್ಡಿನ ಪ್ರಗತಿಯೇ ಮುಖ್ಯ. ಹಾಗಿರುವಾಗ ಇಂತಹ ಕಾರ್ಯದರ್ಶಿಯ ಬಗ್ಗೆ ಪ್ರಧಾನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪರವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ಪ್ರಧಾನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಜನರ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡವರು. ತಮ್ಮ ತಮ್ಮ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ತಮ್ಮದೇ ಆದ ಕನಸನ್ನು ಇಟ್ಟುಕೊಂಡವರು. ಅವರವರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಇಂತಹ ಕಾರ್ಯದರ್ಶಿ ಇದ್ದರೆ ಅದು ಕಂಟಕ ಎನ್ನುವ ಅರಿವು ಖಂಡಿತ ಅವರೆಲ್ಲರಿಗೂ ಬರದೇ ಇರಲು ಸಾಧ್ಯವೇ.

300x250 AD

ಮತ ಹಾಕಿ ಗೆಲ್ಲಿಸಿಕೊಟ್ಟ ಮತದಾರರೇ ಗ್ರಾಮ ಪಂಚಾಯಿತಿಯ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಮುಖ್ಯವಾಗಿಬೇಕಾದಾಗ ಈ ಕಾರ್ಯದರ್ಶಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೆ ಆದಲ್ಲಿ ತಮ್ಮ ತಮ್ಮ ವಾರ್ಡಿನ ಅಭಿವೃದ್ಧಿ ಕಾರ್ಯಕ್ಕೆ ಮತ್ತು ಜನತೆಗೆ ಮಾಡಬಹುದಾದ ದ್ರೋಹವಾಗಬಹುದು.

ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಜನತೆಗಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಓರ್ವ ವ್ಯಕ್ತಿಗಿಂತ ತಮ್ಮ ತಮ್ಮ ವಾರ್ಡ್ ಗಳ ಅಭಿವೃದ್ಧಿಯೆ ಮುಖ್ಯ ಎಂಬುದನ್ನರಿತು ಮುನ್ನಡೆಯಲ್ಲಿದ್ದಾರೆ ಎಂಬ ಬಲವಾದ ನಂಬಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಯದ್ದಾಗಿದೆ.

ಇನ್ನೂ ಈ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಅಂದರೇ ತಾಲ್ಲೂಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿಯವರಿಗೆ ಅಚ್ಚುಮೆಚ್ಚು. ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರ ಕೃಪಕಟಾಕ್ಷವೆ ಈ ಕಾರ್ಯದರ್ಶಿಯ ಇಂತಹ ದುಸ್ಸಾಹಸಕ್ಕೆ ಕಾರಣವಾಗಿರಬಹುದೇ ಎಂಬ ಅನುಮಾನ ಮೂಡತೊಡಗಿದೆ.

ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರಿಗೆ ತಾಲೂಕಿನ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯ ಬಗ್ಗೆ ಇಚ್ಛಾಶಕ್ತಿ ಇದ್ದಲ್ಲಿ, ಕೂಡಲೇ ಈ ಕಾರ್ಯದರ್ಶಿಯ ಅವ್ಯವಹಾರಗಳ ಬಗ್ಗೆ ಪರಿಶೀಲನೆಯನ್ನು ನಡೆಸಿ, ನೈಜ ವರದಿಯನ್ನು ಮಾಡಿ, ಮೇಲಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೆ. ಇಲ್ಲದೇ ಹೋದರೆ ಭಾರತಿಯವರಂತ ಅಧಿಕಾರಿಗೆ ತಮ್ಮ ಜಾಗವನ್ನು ಬಿಟ್ಟು ಕೊಡಬೇಕಾದ ಸ್ಥಿತಿ ನಿರ್ಮಾಣವಾಗುವುದಂತು ತಪ್ಪಿದ್ದಲ್ಲ.

Share This
300x250 AD
300x250 AD
300x250 AD
Back to top