ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಮೊಸಳೆಗುಂಡಿ, ಸಂಪಖಂಡದಲ್ಲಿ ಮಳೆಯ ಪರಿಣಾಮ ವಿಪರೀತವಾಗಿ ರಸ್ತೆಯಂಚುಗಳಲ್ಲಿ ಮಣ್ಣು ಕುಸಿತ, ಮರ ಉರುಳುವಿಕೆ ಪ್ರಮಾಣ ಹೆಚ್ಚುತ್ತಿದೆ.
ರೇವಣಕಟ್ಟಾ ಭಾಗದಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಂಚಿನ ಮಣ್ಣಿನ ಧರೆಗಳು ಕುಸಿಯುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಿ ಓಡಾಟ ನಡೆಸಬೇಕಿದೆ. ಸಂಪಖಂಡದಲ್ಲಿ ಕೆಲ ರೈತರ ಮನೆ, ತೋಟಕ್ಕೆ ನೀರು ನುಗ್ಗಿರುವ ಘಟನೆಯೂ ವರದಿಯಾಗಿದೆ.