Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

300x250 AD

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರಥುಃ| ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ ||

ಭಾವಾರ್ಥ :                           

300x250 AD

ವಿಧವಿಧವಾದ ‘ಕುಂಠವು’ ಎಂದರೆ ಚಲನಕ್ಕೆ ಅಡ್ಡಿಯು ‘ವಿಕುಂಠಾ’ ಎನಿಸುತ್ತದೆ. ವಿಕುಂಠವನ್ನು ಮಾಡುವದರಿಂದ ‘ವೈಕುಂಠನು’. ಜಗತ್ತಿನ ಆರಂಭದಲ್ಲಿ ಪೃಥ್ವಿ,ನೀರು,ಬೆಂಕಿ,ಗಾಳಿ ಮತ್ತು ಆಕಾಶ ಇವುಗಳ ಸ್ವೇಚ್ಛಾಗತಿಯನ್ನು ತಡೆಗಟ್ಟಿ ಅವುಗಳು ಸರಿಯಾದ ಪ್ರಮಾಣದಲ್ಲಿ ಒಂದಕ್ಕೊಂದು ಸೇರಿಕೊಂಡು ಜಗತ್ತಾಗುವಂತೆ ಮಾಡುವವನು.ಆತನ ವಾಸದಿಂದಾಗಿ ವಿಷ್ಣುವಿನ ನಿವಾಸ ಸ್ಥಾನ ಅಂದರೆ ನಮ್ಮ ಹೃದಯವು ‘ವೈಕುಂಠ’ವೆನಿಸುತ್ತದೆ. ಎಲ್ಲಕ್ಕಿಂತಲೂ ಮೊದಲು ಇರುವದರಿಂದ ಅಥವಾ ಎಲ್ಲ ಪಾಪವನ್ನೂ ನಾಶಗೊಳಿಸುವದರಿಂದ ಇವನು ‘ಪುರುಷನು’.ದೇಹದಲ್ಲಿ ಪ್ರಾಣಕ್ರಿಯೆ,ಇಂದ್ರಿಯ ಕ್ರಿಯೆಗಳನ್ನು ಮಾಡುವವನು. ಕ್ಷೇತ್ರಜ್ಞನ ರೂಪದಿಂದ ಇರುವವನು. ಆದ್ದರಿಂದ ‘ಪ್ರಾಣನು’. ಅಂತ್ಯಕಾಲದಲ್ಲಿ ಪ್ರಾಣವನ್ನು ತೆಗೆಯುವವನು.ಆದ್ದರಿಂದ ‘ಪ್ರಾಣದಃ’.ಓಂಕಾರ ರೂಪದವನಾಗಿದ್ದರಿನ ‘ಪ್ರಣವನು’.ಎಲ್ಲರಿಂದಲೂ ನಮಸ್ಕರಿಸಲ್ಪಡುವವನು. ಯಾವ ದೇವರಿಗೂ ನಮಸ್ಕರಿಸಿದರೂ ಅದು ಇವನೊಬ್ಬನಿಗೇ ಸಲ್ಲುತ್ತದೆ. ಪ್ರಪಂಚ ರೂಪದಿಂದ ಹರಡಿಕೊಳ್ಳುವುದರಿಂದ ‘ಪ್ರಥು’ವೆನಿಸಿರುತ್ತಾನೆ. ಪ್ರಪಂಚದ ಉತ್ಪತ್ತಿಗೆ ಕಾರಣವಾದ ಹಿರಣ್ಮಯ (ಚಿನ್ನ)ಮೊಟ್ಟೆಯು ಇವನ ಗರ್ಭದಲ್ಲಿರುತ್ತದೆ. ಆದ್ದರಿಂದ ‘ಹಿರಣ್ಯಗರ್ಭನು’. ದೇವತೆಗಳ ಶತ್ರುಗಳನ್ನು,ನೀಚಪ್ರವೃತ್ತಿಗಳನ್ನು ಕೊಲ್ಲುತ್ತಾನೆ. ಆದ್ದರಿಂದ ‘ಶತ್ರುಘ್ನನು’.ಎಲ್ಲೆಲ್ಲಿಯೂ ವ್ಯಾಪಿಸಿದ್ದಾನೆ ಆದ್ದರಿಂದ ‘ವ್ಯಾಪ್ತನು’.ವಾತಿ-ವಾಸನೆಯನ್ನು ಮಾಡುತ್ತಾನೆ.ಆದ್ದರಿಂದ ‘ವಾಯುವು’. ಪೃಥ್ವಿಯಲ್ಲಿ ಒಳ್ಳೆಯ ವಾಸನೆಯು ನಾನು ಎಂದು (ಗೀ.೭-೯) ಭಗವದ್ವಚನದಿಂದ ಈ ಅಭಿಪ್ರಾಯವು ಹೊರಡುತ್ತದೆ. ‘ಅಧೋ ನಕ್ಷೀಯತೇ ಜಾತು’ ಆಗಿದ್ದರಿಂದ ‘ಅಧೋಕ್ಷಜನು’.ತನ್ನ ಸ್ವರೂಪದಿಂದ ಯಾವ ಸಂದರ್ಭದಲ್ಲಿಯೂ ಜಾರದವನು.ಸದಾ ಆತ್ಮವಂತನಾಗಿಯೇ ಇರುತ್ತಾನೆ.

ಸ್ತೋತ್ರದ ವೈಶಿಷ್ಟ್ಯತೆ:  ಈ ಸ್ತೋತ್ರವನ್ನು ವಯಸ್ಸಾದವರು ಅವಶ್ಯವಾಗಿ ಹೇಳಬೇಕಾದ ಶ್ರೀ ವಿಷ್ಣು ಸಹಸ್ರನಾಮದಲ್ಲಿರುವ ಶ್ಲೋಕ. ಈ ಮೇಲಿನ ಸ್ತೋತ್ರವು ಪುಬ್ಬಾ(ಹುಬ್ಬಾ) ನಕ್ಷತ್ರದ ೪ ನೇ ಪಾದವರು ಪ್ರತಿನಿತ್ಯ ೧೧ ಬಾರಿ ಹೇಳಿಕೊಳ್ಳಬೇಕಾದ ಸ್ತೋತ್ರವಾದರೂ ಇದನ್ನು (ಸ್ತೋತ್ರವನ್ನು)ಯಾವುದೇ ನಕ್ಷತ್ರದಲ್ಲಿ ಜನಿಸಿದ್ದರೂ ವಯಸ್ಸಾದಾಗ ಜೀವನದ ಕೊನೆಯ ಕಾಲದಲ್ಲಿ, ಮರಣ ಭಯದಿಂದ ಬಿಡುಗಡೆ ಹೊಂದಲು,  ಶಾಂತಿ ನೆಮ್ಮದಿಯಿಂದ ಸಮಾಧಾನವಾಗಿ,ದೇವರ ಸ್ಮರಣೆ ಮಾಡುತ್ತಾ ಯಾರ ಕೈಗೂ ಬೀಳದೆ ಯಾರ ಮೇಲೂ ಅವಲಂಬನವಾಗದೆ ಪರಮಾತ್ಮನ ಪಾದಾರವಿಂದ ಸೇರಲು  ಹೇಳಬೇಕು.
(ಸಂ:-ಡಾ. ಚಂದ್ರಶೇಖರ. ಎಲ್.ಭಟ್.ಬಳ್ಳಾರಿ.)

Share This
300x250 AD
300x250 AD
300x250 AD
Back to top