ಶಿರಸಿ: ನಗರದ ಚಿಪಗಿಯ ನಾರಾಯಣಗುರು ನಗರದ ಶ್ರೀ ಅಭಯ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಆರೋಗ್ಯ ಭಾರತಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಕ್ರಮ’ವು ನಡೆಯಿತು.
ಮಹಿಳೆಯರ ಆರೋಗ್ಯ ಮತ್ತು ಆಹಾರದ ಬಗ್ಗೆ ಶಿರಸಿಯ ಮಹಿಳಾ ತಜ್ಞ ವೈದ್ಯರಾದ ಶ್ರೀಮತಿ ಆಶಾ ಪ್ರಭು ಮಹಿಳೆಯ ಬೆಳವಣಿಗೆಯ ಅನೇಕ ಹಂತಗಳಲ್ಲಿ ಶರೀರದಲ್ಲಿ ಆಗುವಂತ ಹಾರ್ಮೋನ್ಸ್ಗಳ ಬದಲಾವಣೆಯಿಂದ ಹಾಗೂ ಋತುಚಕ್ರದ ಸಮಯದಲ್ಲಿ ಶರೀರದಲ್ಲಿ ಆಗುವಂತ ಕೆಲವು ಸಹಜ ಬದಲಾವಣೆಗಳಿಂದ ಮಹಿಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಈ ಎಲ್ಲ ಸಮಸ್ಯೆಗಳು ಮಹಿಳೆಯ ಸಹಜ ಬದಲಾವಣೆಗಳು ಇವುಗಳನ್ನು ಯಾರು ಸಹ ನಿಗ್ರಹಿಸಬಾರದು. ಇದರಿಂದ ಶರೀರದಲ್ಲಿ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಆ ಬದಲಾವಣೆಗಳಿಗೆ ತನ್ನನ್ನು ತಾನು ಸಹಜವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಮನೆಯಲ್ಲಿ ತಾಯಿ,ಅಕ್ಕ ತನ್ನ ಒಡನಾಡಿಗಳ ಜೊತೆ ತನ್ನ ಅನಿಸಿಕೆಯನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಯಾವುದೇ ನಾಚಿಕೆ, ಅಂಜಿಕೆ, ಭಯಗಳಿಗೆ ಒಳಗಾಗದೆ ಸಹಜವಾಗಿದ್ದಾಗ ಶರೀರವು ಸಹಜವಾಗಿರುತ್ತದೆ. ಜೊತೆಗೆ ದೇಶದಲ್ಲಿ ಇಂದು ಕ್ಯಾನ್ಸರ್ ಮಾರಕ ಕಾಯಿಲೆ ಅತಿ ಶೀಘ್ರವಾಗಿ ಹರಡುತ್ತದೆ ಪ್ರತಿಯೊಬ್ಬ ವ್ಯಕ್ತಿಯ ಶರೀರದಲ್ಲಿ ಕ್ಯಾನ್ಸರ್ ಸೆಲ್ಸ್ಗಳು ಇರುತ್ತವೆ. ಅವುಗಳು ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಅವುಗಳು ಶರೀರದ ಹೃದಯ, ಮೆದುಳು, ಕರುಳು, ಮೂತ್ರಕೋಶ, ಶರೀರದಲ್ಲಿ ಎಲ್ಲೆಂದರಲ್ಲಿ ಆಕ್ರಮಣ ಮಾಡುತ್ತವೆ ಕ್ಯಾನ್ಸರ್ ಸೆಲ್ಗಳು ಒಂದು ಇದ್ದದ್ದು ನೂರಾಗಿ, ಲಕ್ಷವಾಗಿ ಶೀಘ್ರವೇ ಹರಡುತ್ತದೆ. ಆದ್ದರಿಂದ ಪ್ರತಿ ಮೂರು ನಿಮಿಷಕ್ಕೊಮ್ಮೆ ಮಹಿಳೆ ಸ್ತನ ಕ್ಯಾನ್ಸರ್ನಿಂದ ಇಂದು ನಿಧನರಾಗುತ್ತಿದ್ದಾರೆ. ಹಾಗಾಗಿ ನಮ್ಮ ಶರೀರದ ಬಗ್ಗೆ ನಾವು ಗಮನಿಸಿಕೊಳ್ಳಬೇಕು. ಶರೀರದಲ್ಲಿ ಕಾಣುವಂತ ಸಣ್ಣಪುಟ್ಟ ಗಂಟುಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು. ಪ್ರಾರಂಭದ ಲಕ್ಷಣಗಳು ಕಂಡುಬಂದರೆ ಶೀಘ್ರವೇ ಉಪಚಾರ ಮುಂದುವರಿಸಿದರೆ ಸಂಪೂರ್ಣ ಖಾಯಿಲೆಯನ್ನು ತಡೆಯಬಹುದು. ಜೊತೆಗೆ ಆಹಾರ, ನಿತ್ಯ ಯೋಗ, ನಡಿಗೆ, ವಿಶ್ರಾಂತಿ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಎಲ್ಲರೂ ಸಹ ಇದನ್ನು ರೂಡಿಸಿಕೊಳ್ಳಬೇಕು ಎಂದು ಆರೋಗ್ಯದ ಬಗ್ಗೆ ಆಹಾರದ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿದರು.
ಆರೋಗ್ಯ ಭಾರತೀಯ ವಿಭಾಗ ಸಹ ಸಂಯೋಜಕ ನಾಗೇಶ್ ಆರೋಗ್ಯ ಭಾರತೀಯ ಆರೋಗ್ಯದ ಅನೇಕ ಅಗತ್ಯ ಕಾರ್ಯಕ್ರಮಗಳು ಉಚಿತವಾಗಿ ನಡೆಯುತ್ತವೆ. ಮಹಿಳೆಯರು ಮಕ್ಕಳು ಪುರುಷರು ಎಲ್ಲರೂ ಸಹ ಆರೋಗ್ಯ ಭಾರತೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರೋಗ್ಯ ಹಾಗೂ ಪರಿಸರದ ಬಗ್ಗೆ ಹೆಚ್ಚು ಜಾಗೃತವಾಗಬೇಕೆಂದು ತಿಳಿಸಿದರು.
ಪ್ರಾರಂಭದಲ್ಲಿ ಶ್ರೀ ಧನ್ವಂತರಿ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ನಂತರ ಶ್ರೀಮತಿ ಸುಶೀಲಾ ಭಟ್ ಮತ್ತು ರಾಜೇಶ್ವರಿ ಹೆಬ್ಬಾರ್ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಷ್ಟ್ರ ಸೇವಿಕಾ ಸಮಿತಿಯ ಶ್ರೀಮತಿ ಶ್ರೀದೇವಿ ದೇಶಪಾಂಡೆ ಕಾರ್ಯಕ್ರಮದ ನಿರೂಪಣೆ ಹಾಗೂ ಶ್ರೀಮತಿ ಮಾಲತಿ ನಾಯಕ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಭಾರತೀಯ ಶಿರಸಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಸುರೇಶ ಹೆಗಡೆ, ರಾಮಚಂದ್ರ ಹೆಗಡೆ, ಪವಿತ್ರಾ ಹೊಸೂರ್ ಉಪಸ್ಥಿತರಿದ್ದರು.